ಚಿಂಚೋಳಿ: ಇಂದು ಚಂದಾಪುರ ದಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ವಿಶೇಷ ಶಿಬಿರ ಯೋಜನೆ ಅಡಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ಕುರಿತು ನಾಗರಿಕ ಜಾಗ್ರತಿ,ಪೌರಕಾರ್ಮಿಕರಿಗೆ ಮತ್ತು ಬಡವರಿಗೆ ಆಹಾರ ಧಾನ್ಯ ಕಿಟ್,ಮಾಸ್ಕ, ಸ್ಯಾನೇಟರ್, ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುರಸಭೆಯ ಆರೋಗ್ಯಾಧಿಕಾರಿ ಆನಂದ್ ಕಾಂಬಳೆ ಆಗಮಿಸಿದ್ದು, ಪ್ರಾಚಾರ್ಯರು ಡಾ. ಶ್ರೀಶೈಲ ನಾಗರಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಅಧಿಕಾರಿ ಪ್ರೊ. ಶಿವರಾಜ ಜಿ ಮಠ ಅವರು ಸ್ವಾಗತಿಸಿದರು. ಡಾ. ಲಕ್ಮ್ಮಣ ರಾಥೋಡ್ ವಂದಿಸಿದರು.
ವೇದಿಕೆ ಮೇಲೆ ಕಾಲೇಜಿನ ನ್ಯಾಕ ಅಧಿಕಾರಿಗಳು ಡಾ.ಸಿ.ವಿ ಕಲಬುರ್ಗಿ, ಡಾ. ಸಿದ್ದಣ್ಣ ಕೊಳ್ಳಿ, ಕ್ರೀಡಾ ನಿರ್ದೇಶಕರಾದ ಭೀಮರೆಡ್ಡಿ, ಬಾಬುರಾವ್, ಅಕ್ರಮ ಪಟೇಲ್ , ಶೀನಿವಾಸ, ವಿದ್ಯಾರ್ಥಿ ಯುವ ಮುಂದಾಳು ಅಂಕಿತಾ ,ಎನ್.ಎಸ್.ಎಸ್ ಸ್ವಯಂ ಸೇವಕರು ಪುರಸಭೆ ಕಾರ್ಮಿಕರು ಹಾಜರಿದ್ದರು.