ಕಲಬುರಗಿ: ಜಿಲ್ಲೆಯ ಸರಕಾರಿ ಜಿಮ್ಸ್ ಆಸ್ಪತ್ರೆ ಮುಂದೆ ಯುವಕ ರೋಗಿ ಓರ್ವರು ಚಿಕಿತ್ಸೆ ಸಿಗದೆ ನಾಲ್ಕು ಗಂಟೆಗಳ ಕಾಲ ಬಿದ್ದು ನರಳಾಡಿರುವ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳಬೇಕೆಂದು ಸಂಬಂಧಿಕರು ಒತ್ತಾಯಸಿದ್ದಾರೆ.
ಸತೀಶ್ ಮಾಲಿಬಿರಾದಾರ (25) ಆಳಂದ ತಾಲೂಕಿನ ಸಂಗೋಳಗಿ (ಸಿ) ಗ್ರಾಮದ ನಿವಾಸಿಯಾಗಿರುವ ಸತೀಶ್, ಶೀತ, ಜ್ವರದಿಂದ ಬಳಲುತ್ತಿದ್ದು ಸತೀಶ್ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರೆ ಕೋವಿಡ್ ಜ್ವರ ಇರಬಹುದು ಎಂದು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲ್ಲೆಯಲ್ಲಿ ನಗರದ ಸರಕಾರಿ ಜಿಮ್ಸ್ ಆಸ್ಪತ್ರೆಗೆ ಕರೆದೊಯಲಾಗಿತ್ತು. ಕೋವಿಡ್-19 ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಟೇಸ್ಟ್ ಮಾಡಲಾಗಿದ್ದು, ಕೋವಿಡ್ ವರದಿ ಅಲ್ಲಿವರೆಗೆ ಕಾಯಬೇಕು ಎಂದು ಆಸ್ಪತ್ರೆಯ ವೈದ್ಯರು ಅಲ್ಲಿಂದ ಜಾರಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸತೀಶ್ ಆಸ್ಪತ್ರೆಯ ಆವರಣದಲ್ಲಿಯೇ ನಾಲ್ಕು ಗಂಟೆಗಳ ಕಾಲ ನರಳಾಡಿದ್ದು, ಚಿಕಿತ್ಸೆ ನೀಡಿ ಎಂದು ಆತನ ಸಂಬಂಧಿಕರು ಅಂಗಲಾಚಿದರೂ ಚಿಕಿತ್ಸೆ ನೀಡದೇ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಅಮಾನವಿಯವಾಗಿ ವರ್ತಿಸಿದ್ದಾರೆ ಎಂದು ಸಂಬಂಧಿಕರಾದ ನ್ಯಾಯವಾದಿ ಭೀಮಾಶಂಕರ ಮಾಡಿಯಾಳ್ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರು.
ಸದ್ಯ ಕೋವಿಡ್-19 ರಿಪೋರ್ಟ್ ನೆಗೆಟಿವ್ ಬಂದಿದರೂ ಸಹ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಎಂದು ಹೇಳಿದ್ದಾರೆಂದು ಯುವಕನ ಪೋಷಕರು ಆರೋಪಿಸಿದ್ದಾರೆ. ಯುವಕನಿಗೆ ಕನಿಷ್ಠ ಪಕ್ಷ ಪ್ರಾಥಮಿಕ ಚಿಕಿತ್ಸೆ ಸಹ ನೀಡದೇ ಅಮಾನವಿಯ ವರ್ತನೆ ನಡೆಸಿದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಡಿಯಾಳ ಒತ್ತಾಯಿಸಿದ್ದಾರೆ.