ಕೋವಿಡ್-19 ಹಿನ್ನೆಲೆ: ಆಗಸ್ಟ್ 9 ರಿಂದ 12 ರವರೆಗೆ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತ

0
28
ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತವನ್ನು 2020ರ ಆಗಸ್ಟ್ 9 ರಿಂದ 12 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್.ಜೆ. ಸತೀಶ್ ಸಿಂಗ್ ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಯಾವುದೇ ನ್ಯಾಯಾಂಗ ಮತ್ತು ಇತರೆ ನ್ಯಾಯಾಂಗ ಹಾಗೂ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ರದ್ದುಪಡಿಸಲಾಗಿದೆ. ಕೇವಲ ತುರ್ತು ಕಲಾಪಗಳ ಪ್ರಕರÀಣಗಳನ್ನು ಇ-ಮೇಲ್ ಮಾತ್ರ ಸ್ವೀಕರಿಸಲಾಗುವುದು ಹಾಗೂ ವಿಡಿಯೋ ಕಾನ್ಫ್ರೆನ್ಸ್ (ದೃಶ್ಯ ಮಾಧ್ಯಮ) ಗಳ ಮೂಲಕ ಆಲಿಸಲಾಗುವುದು.
ಕೋವಿಡ್-19 ಹಿನ್ನೆಲೆಯಲ್ಲಿ ಈಗಾಗಲೇ 2020ರ ಆಗಸ್ಟ್ 6 ರಿಂದ 8 ರವರೆಗೆ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪಗಳು ಇರುವುದಿಲ್ಲ ಎಂದು ತಿಳಿಸಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here