ಕಲಬುರಗಿ: ಕೊರೊನಾ ರೋಗವು ಅತಿ ಹೆಚ್ಚು ಹರಡುತ್ತಿದೆ ಹಿನ್ನೆಲೆಯಲ್ಲಿ ಜನಘಟ್ಟ ಪ್ರದೇಶದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ರಾಹುಲ್ ಪಾಂಡವರ ಆದೇಶದಂತೆ ನಗರದ ವಿವಿಧ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಸ್ವಚ್ಛತೆ ಮತ್ತು ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಕಲ್ಬುರ್ಗಿ ಅನೇಕ ಸ್ಥಳಗಳಲ್ಲಿ ಜನರ ಪ್ರೇರಣೆ ಮತ್ತು ಜನರ ಸಹಕಾರದಿಂದ ನಾವು ಸುಂದರೀಕರಣ ಗೊಳಿಸಲು ಸ್ವಚ್ಛತಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ರಾಹುಲ್ ಪಾಂಡವರ ಆದೇಶ ನೀಡಿದ್ದಾರೆ ಎನ್ನಲಾಗಿದೆ.
ನಗರದ ಸೂಪರ್ ಮಾರ್ಕೆಟ್, ಚಪ್ಪಲ್ ಬಜಾರ್, ಫ್ಲಾವರ್ ಮಾರ್ಕೆಟ್ ರಸ್ತೆಯಲ್ಲಿ ವ್ಯಾಪಾರ ಸ್ಥಳಗಳಲ್ಲಿ ಅಸ್ವಚ್ಛತೆ ಹೆಚ್ಚು ಕಂಡುಬಂದ ಕಾರಣ ಸ್ವಚ್ಛತೆ ಮತ್ತು ಜನರ ಆರೋಗ್ಯ ಕಾಪಾಡುವ ಕರ್ತವ್ಯ ನಡೆಸಲಾಗಿದೆ ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳ ಡಾ. ವಿನೋದ್ ಕುಮಾರ್ ಅವರು ಮಾತನಾಡಿ ತಿಳಿಸಿದರು.
ಜನರ ಆರೋಗ್ಯ ಮತ್ತು ನಗರ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಮತ್ತು ನಮ್ಮ ಜನರ ಕರ್ತವ್ಯ ಕಲಬುರಗಿ ಸುಂದರ ನಗರವನ್ನಾಗಿ ಮಾಡಲು ಎಲ್ಲರೂ ಪಾಲಿಕೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿಕೊಂಡಿದರು.