ವಾಡಿ ಮಾರ್ಕೇಟ್ ರಸ್ತೆ-ಚರಂಡಿ ಅಭಿವೃದ್ಧಿಗೆ 2 ಕೋಟಿ

0
65

ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಹಾಗೂ ಮಾಂಸ ಮಾರುಕಟ್ಟೆಯ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ 2.63 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಜನರಿಗೆ ಉತ್ತಮ ಸಿಸಿ ರಸ್ತೆಯ ಸೌಲಭ್ಯ ದೊರಕಲಿದೆ ಎಂದು ಪುರಸಭೆ ಸದಸ್ಯೆ, ಕಾಂಗ್ರೆಸ್‍ನ ಗುಜ್ಜಾಬಾಯಿ ಸಿಂಗೆ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ವಾರ್ಡ್-16ರಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಸರಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದಾಗ ವಾಡಿ ನಗರಕ್ಕೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದರು. ಪರಿಣಾಮ ಹದಗೆಟ್ಟಿದ್ದ ಮಾರುಕಟ್ಟೆಯ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪುರಸಭೆ ಆಡಳಿತ ಮುಂದಾಗಿದೆ. ಗುಣಮಟ್ಟದ ಕಾಂಕ್ರೀಟ್ ರಸ್ತೆ, ವೈಜ್ಞಾನಿಕ ರೀತಿಯ ಚರಂಡಿ, ಪುಟ್‍ಪತ್ ನಿರ್ಮಿಸಲಾಗುತ್ತಿದೆ. ಅಲ್ಲದೆ ತೃಪ್ತಿಕರವಾಗಿ ಬೆಳಕಿನ ಸೌಲಭ್ಯ ಒದಗಿಸಲು ಬೀದಿ ದೀಪಗಳ ಅಳವಡಿಕೆ ಮಾಡಲಾಗುತ್ತಿದೆ. ವಾಡಿ ನಗರದಲ್ಲಿ ಅಭಿವೃದ್ಧಿಯ ಪರ್ವ ಶುರುವಾಗಿದೆ ಎಂದರು.

Contact Your\'s Advertisement; 9902492681

ವಾಡಿ-ಶಹಾಬಾದ ನಗರ ಯೋಜನೆ ಪ್ರಾದೀಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಮುಖಂಡರಾದ ವಿಜಯಕುಮಾರ ಸಿಂಗೆ, ಶ್ರವಣಕುಮಾರ ಮೌಲಸಗಿ, ನಾಗೇಂದ್ರ ಜೈಗಂಗಾ, ಮಹ್ಮದ್ ಗೌಸ್, ರವಿಕುಮಾರ ಸಿಂಗೆ, ಬಾಬು ಕುಡಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here