ಕಾಮ್ರೇಡ್ ಶಿವದಾಸ್ ಘೋಷ್ ರವರ 44ನೇ ಸ್ಮಾರಕ ಸಭೆ

0
49
ಶಹಾಬಾದ: ಕಾರ್ಮಿಕ ವರ್ಗವನ್ನು ಪ್ರೀತಿಸಿದಾಗ ಮಾತ್ರ ಮಾರ್ಕ್ಸವಾದ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಎಸ್.ಯು.ಸಿ.ಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್. ಇಬ್ರಾಹಿಂಪೂರ ಹೇಳಿದರು.
ಅವರು ಎಸ್.ಯು.ಸಿ.ಐ ಕಮುನಿಷ್ಟ ಸ್ಥಳೀಯ ಸಮಿತಿಯಿಂದ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾಮ್ರೇಡ್ ಶಿವದಾಸ್ ಘೋಷ್ ರವರ 44ನೇ ಸ್ಮಾರಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಮ್ರೇಡ್ ಶಿವದಾಸ್ ಘೋಷ್ ರವರು ಮಾಕ್ರ್ಸವಾದವನ್ನು ಸಮೃದ್ಧಗೊಳಿಸಿದ ಕಾರ್ಮಿಕ ವರ್ಗದ ಮಹಾನ್ ನಾಯಕ.ಕಾರ್ಮಿಕ  ವರ್ಗದವರು, ಬಡವರು ಇಂದು ಬಹಳ ಸಂಕಷ್ಟದ ಪರಿಸ್ಥಿಯಲ್ಲಿವೆ.ಅವರನ್ನು ಆಳುತ್ತಿರುವ ಸರಕಾರ ವಿವಿಧ ನೀತಿಗಳನ್ನು ಜಾರಿಗೊಳಿಸುವ ಮೂಲಕ ಬೀದಿಪಾಲು ಮಾಡಲು ಹೊರಟಿವೆ.ಆದ್ದರಿಂದ ಕಾರ್ಮಿಕರು, ರೈತರು, ಬಡವರು ಸ್ವಾಭಿಮಾನದ ಬದುಕನ್ನು ನಿರ್ವಹಿಸಬೇಕಾದರೆ ಶಿವದಾಸ್ ಘೋಷ್ ಅವರ ವಿಚಾರಗಳನ್ನು ತಿಳಿದುಕೊಂಡು ಬಂಡವಾಳಶಾಹಿ ವಿರುದ್ಧ ಸಮಾಜವಾದಿ ಕ್ರಾಂತಿ ಜರಗಿಸಲು ಕಾರ್ಮಿಕ ವರ್ಗ ಸಜ್ಜಾಗಬೇಕೆಂದರು.
ಎಸ್.ಯು.ಸಿ.ಐ ಕಮುನಿಷ್ಟ ಪಕ್ಷದ ಕಾರ್ಯದರ್ಶಿ ಗಣಪತ್ರಾವ್.ಕೆ.ಮಾನೆ ಮಾತನಾಡಿ, ಪ್ರಸಕ್ತ ಭಾರತ ಪರಿಸ್ಥಿತಿಯು ಬಹಳಷ್ಟು ಬಿಕ್ಕಟಿನಲ್ಲಿದ್ದು ದುಡಿಯುವ ವರ್ಗವು ತೀವ್ರ ಸಂಕಷ್ಟದಲ್ಲಿದೆ. ಇವರ ಎಲ್ಲಾ ಸಮಸ್ಯೆಗಳಿಗೆ ಮಾರ್ಕ್ಸವಾದ ಒಂದೆ ಪರಿಹಾರ ಎಂದು ಹೇಳಿದರು.                                                                                                                                    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಯು.ಸಿ.ಐ ಕಮುನಿಷ್ಟ ಪಕ್ಷದ ಸದಸ್ಯ ರಾಘವೇಂದ್ರ.ಎಮ್.ಜಿ ವಹಿಸಿದ್ದರು.ಜಗನ್ನಾಥ.ಎಸ್.ಹೆಚ್, ಗುಂಡಮ್ಮ ಮಡಿವಾಳ,ರಾಜೇಂದ್ರ ಅತನೂರು,ಸಿದ್ದು ಚೌಧರಿ, ಶಿವುಕುಮಾರ.ಇ.ಕೆ, ತಿಮ್ಮಯ್ಯ.ಬಿ.ಮಾನೆ, ನೀಲಕಂಠ.ಎಮ್.ಹುಲಿ, ತುಳಜರಾಮ.ಎನ್.ಕೆ, ರಮೇಶ ದೇವಕರ್, ಮಾಹಾದೇವಿ ಅತನೂರ, ಶಿಲ್ಪಾ.ಎಮ್.ಹುಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here