ಕಲಬುರಗಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 /614 ಅಂಕ ಪಡೆದು 98.24% ಪ್ರತಿಶತ ಅಂಕ ಪಡೆದು ವೀರಶೈವ ಸಮಾಜಕ್ಕೆ ಕೀರ್ತಿ ತಂದ ರೇಣುಕಾ ಜಿ ನೀಲಾ ರವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಸನ್ಮಾನಿಸಲಾಯಿತು.
ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಡಾ. ಸುಧಾ ಹಾಲಕಾಯಿ ಸನ್ಮಾನಿಸಿ ಶುಭಕೋರಿದರು, ಇದೇ ಸಂದರ್ಭದಲ್ಲಿ ಮಹಾಸಭೆಯ ಜಿಲ್ಲಾ ಯುವ ಘಟಕ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ, ವಿಕಾಸ ನೀಲಾ, ಗುರುಪ್ಪ ನೀಲಾ, ಗೀತಾ ನೀಲಾ ಹಾಜರಿದ್ದರು.