ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿ ಸುಮಾರು 300ಕ್ಕೂ ಹೆಚ್ಚು ಜನರು ಬಂಧನಕ್ಕೊಳಗಾಗಿದ್ದು, ಬಂಧಿತರ ಪೋಷಕರು ಪೊಲೀಸ್ ಠಾಣೆಯ ಮುಂದೆ ತಮ್ಮ ಮಕ್ಕಳು ಅಮಾಯಕರು, ಯಾವುದೇ ತಪ್ಪು ಮಾಡಲಿಲ್ಲ ಎಂದು ಅಳಲು ತೋಡಿಕೊಂಡು ಬಿಡುಗಡೆ ಮಾಡಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.
ಕೆಜಿ ಹಳ್ಳಿ, ಡಿಜೆ ಹಳ್ಳಿಯ ಸುತ್ತಮುತ್ತ ನಡೆದ ಗಲಭೆಗಳಿಗೂ ನನ್ನ ಮಕ್ಕಳಿಗೂ ಸಂಬಂಧವಿಲ್ಲ. ಆದರೂ ಪೊಲೀಸರು ನಮ್ಮ ಮಕ್ಕಳನ್ನು ಬಂಧಿಸಿದ್ದಾರೆಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಇತ್ತೀಚೆಗೆ ಪೇಸ್ ಬುಕ್ ನಲ್ಲಿ ಪ್ರವಾದಿಯವರ ಕುರಿತು ವ್ಯಕ್ತಿಯೊಬ್ಬ ವಿವದಾತ್ಮಕ ಪೋಸ್ಟ್ ಹಾಕಿದ್ದ. ಇದನ್ನು ಖಂಡಿಸಿ ಡಿಜೆ ಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಕೆಲವು ಪುಂಡರು ಗಲಭೆ ನಡೆಸಿ ಅಪಾರ ಹಾನಿಯನ್ನುಂಟು ಮಾಡಿದ್ದಾರೆ.
ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಪರಿಸ್ಥಿತಿ ಶಾಂತಾವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅಗಸ್ಟ್ 18ರವರೆಗೆ ನಿಷೇಧಾಜ್ಞೆ ಮುಂದುವರೆಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ