ಕಲಬುರಗಿ: ಕೆಪಿಎಸ್ಸಿ ಪರೀಕ್ಷಾ ಕೇಂದ್ರಗಳಿಗೆ ಡಾ.ರಂಗರಾಜ ವನದುರ್ಗ ಭೇಟಿ

0
156

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹುದ್ದೆಗಳ ಭರ್ತಿಗೆ ಸೋಮವಾರ  ಕಲಬುರಗಿಯಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಕೇಂದ್ರಗಳಿಗೆ ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ವನದುರ್ಗ ಭೇಟಿ ನೀಡಿ, ವೀಕ್ಷಿಸಿದರು.

ನಗರದ ಜಿಲ್ಲಾ ಕೋಟ್೯ ರಸ್ತೆಯ ಪಕ್ಕದ ಶ್ರೀಮತಿ ಪಿಲ್ಲೂ ಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯ, ಮಹರ್ಷಿ ವಿದ್ಯಾಮಂದಿರ ಶಾಲೆ ಸೇರಿ ನಾನಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸುಸೂತ್ರ ಮತ್ತು ನಿಯಮಾನುಸಾರ  ಪಾರದರ್ಶಕವಾಗಿ ಪರೀಕ್ಷೆಗಳು ನಡೆಯುತ್ತಿವೆಯೇ ಎಂದು ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳ ಬಹುತೇಕ ಕೋಣೆಗಳಿಗೆ ಭೇಟಿ ನೀಡಿ, ವೀಕ್ಷಣೆ ಮಾಡಿದರು.

Contact Your\'s Advertisement; 9902492681

ಪರೀಕ್ಷೆಗೆ 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು: ನಗರದ ನಾನಾ ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹುದ್ದೆಗಳಿಗೆ 2052 ಪರೀಕ್ಷಾರ್ಥಿಗಳು ಪೂರ್ವಭಾವಿ ಪರೀಕ್ಷೆಯ ಪ್ರಥಮ ಪತ್ರಿಕೆ  ಸಾಮಾನ್ಯ ಅಧ್ಯಯನ, ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ದ್ವಿತೀಯ ಪತ್ರಿಕೆ ಬರೆದರು.

ರಾಜ್ಯ ಸರಕಾರದ ಮಾರ್ಗಸೂಚಿಯ ಪ್ರಕಾರವೇ ಕೆಪಿಎಸ್ಸಿ ಈ ಪರೀಕ್ಷೆಗಳನ್ನು ನಡೆಸುತ್ತಿದೆ. ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೇ ಖುಷಿಯಿಂದ ಪರೀಕ್ಷೆ ಬರೆದಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಯಿತು. ಆತ್ಮಸ್ಥೈರ್ಯದಿಂದ ಕ.ಕ.ಅಭ್ಯರ್ಥಿಗಳು ಸ್ಪರ್ಧೆಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದು, ಸಂತಸದ ಸಂಗತಿ. – ಡಾ. ರಂಗರಾಜ ವನದುರ್ಗ, ಸದಸ್ಯರು, ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು.

ಸರಕಾರದ ಸೂಚನೆಗಳಂತೆ ಕೆಪಿಎಸ್ಸಿ ಅತ್ಯಂತ ಸುರಕ್ಷಿತವಾಗಿ ಪರೀಕ್ಷೆ ನಡೆಸಿದೆ. ಕೊರೊನಾದ ಆತಂಕವಿಲ್ಲದೇ ಧೈರ್ಯವಾಗಿ ಪರೀಕ್ಷೆ ಹಾಜರಾಗಿ ಬರೆದಿದ್ದೇನೆ. – ಹೆಸರೆಳಲ್ಚಿಸಿದ ಪರೀಕ್ಷಾರ್ಥಿ, ಕಲಬುರಗಿ ಪರೀಕ್ಷಾ ಕೇಂದ್ರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here