ಯಾದಗಿರಿ: ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ರಸಗೊಬ್ಬರ ಸಾಗಾಣಿಕೆಯಾಗುತಿರುವ ಖಚಿತ ಮಾಹಿತಿಯ ಮೇರೆಗೆ ಕೃಷಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ತನಿಖೆ ನಡೆಸಿ ಲಾರಿಯೊಂದನ್ನು ಜಪ್ತಿ ಮಾಡಿರುವ ಘಟನೆ ಶಹಾಪುರ ತಾಲ್ಲೂಕಿನ ಮೂಡಬೂಳ ಗ್ರಾಮದ ಹತ್ತಿರ ಜರುಗಿದೆ.
ತಾಲ್ಲೂಕಿನ ಮುಡಬೂಳ ಗ್ರಾಮದಿಂದ ಸುಮಾರು ೨೮೦ ಕ್ಕೂ ಹೆಚ್ಚು ರಸಗೊಬ್ಬರ ಚೀಲಗಳು ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದ ಪರಿಣಾಮವಾಗಿ ಲ ಲಾರಿಯನ್ನು ಜಪ್ತಿ ಮಾಡಿಕೊಂಡಿ ಓರ್ವನನ್ನು ಬಂಧಿಸಲಾಗಿದೆ.ಬಂಧಿತ ಆರೋಪಿ ಜೇವರಗಿ ತಾಲ್ಲೂಕಿನ ನೇಲೋಗಿ ಗ್ರಾಮದ ಗುರು ದೇಸಾಯಿ ಎಂದು ತಿಳಿದು ಬಂದಿದೆ.
ಅಕ್ರಮ ರಸಗೊಬ್ಬರ ಸಾಗಾಣಿಕೆಯಲ್ಲಿ ಕೆಲವು ಕಾಣದ ಕೈಗಳು ಇರುವುದರಿಂದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಭೀಮರಾಯನಗುಡಿ ಪೊಲೀಸ್ ಠಾಣೆಯ ಪಿಎಸ್ಐ ರಾಜಕುಮಾರ ಜಾಮಗೊಂಡ ತಿಳಿಸಿದ್ದಾರೆ.ಈ ದಾಳಿಯ ವೇಳೆಯಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಜಗನ್ನಾಥ್ ರೆಡ್ಡಿ ಹಾಗೂ ಗೋಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯಾದ ಅಮರೇಶ್ ಹಾಗೂ ಇತರರು ಉಪಸ್ಥಿತರಿದ್ದರು.