ಸುರಪುರ: ಪಾದಯಾತ್ರೆಯಿಂದ ಮನುಷ್ಯನ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ದೊರೆಯಲಿದೆ ಅಲ್ಲದೆ ದೇವರ ಕೃಪೆಗೆ ಪಾತ್ರವಾಗಲು ಪಾದಯಾತ್ರೆಯಿಂದ ದೇವರ ದರುಶನಕ್ಕೆ ತೆರಳುವುದು ಹಿಂದು ಸಂಪ್ರದಾಯದಲ್ಲಿ ಮುಖ್ಯವಾದುದಾಗಿದೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಲಕ್ಷ್ಮೀಪುರ ಗ್ರಾಮದ ಭಕ್ತರು ಸುಕ್ಷೇತ್ರ ಅಬ್ಬೆತುಮಕೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಕ್ಷ್ಮೀಪುರ ಗ್ರಾಮಸ್ಥರು ಅಬ್ಬೆತುಮಕೂರಿನ ವಿಶ್ವರಾಧ್ಯರ ಭಕ್ತರಾಗಿದ್ದು ಕಳೆದ ೨೨ ವರ್ಷಗಳಿಂದ ಪ್ರತಿವರ್ಷದ ಶ್ರಾವಣದಲ್ಲಿ ಪಾದಯಾತ್ರೆ ಮಾಡುತ್ತಾರೆ.ಈಗ ೨೩ನೇ ವರ್ಷದ ಪಾದಯಾತ್ರೆ ಆರಂಭಿಸಿ ನಾಡಿಗೆ ಮಳೆ ಬೆಳೆ ಚೆನ್ನಾಗಿ ಬರಲೆಂದು ವಿಶ್ವರಾಧ್ಯರಲ್ಲಿ ಪ್ರಾರ್ಥಿಸಲು ತೆರಳುತ್ತಿರುವುದಾಗಿ ತಿಳಿಸಿದರು.
ಪಾದಯಾತ್ರೆಯ ನೇತೃತ್ವ ವಹಿಸಿದ್ದ ಆನಂದ ವಿಶ್ವಕರ್ಮ ಮಾತನಾಡಿ,ಇಂದು ಆರಂಭಗೊಳ್ಳುವ ಪಾದಯಾತ್ರೆ ಇಂದು ರಾತ್ರಿ ಯಾದಗಿರಿ ಬಳಿಯ ಖಾನಾಪುರದಲ್ಲಿ ವಸತಿ ಮಾಡಿ ನಾಳೆ ಮದ್ಹ್ಯಾನದ ವೇಳೆಗೆ ಅಬ್ಬೆತುಮಕೂರು ಶ್ರೀಮಠಕ್ಕೆ ತಲುಪಲಿದೆ ಎಂದರು ತಿಳಿಸಿದರು.ಶಿವರಾಜ ಕಲಕೇರಿ ಇದ್ದರು.
ಪಾದಯಾತ್ರೆಯಲ್ಲಿ ದಾನಪ್ಪ ಕಡಿಮನಿ ಚಂದ್ರಕಾಂತ ಮ್ಯಾಕಲ್ ಮರೆಣ್ಣ ದೇವಾಪುರ ಅರಳೆಪ್ಪ ಪೂಜಾರಿಮಲ್ಲು ಸುಗೂರು ಹಣಮಂತ ಗೌಂಡಿ ರಮೇಶ ಹಬ್ಬ ಬಸವರಾಜ ಕಡಿಮನಿ ಶಕುಂತಲಾ ನಾಯಕ ಬಸಮ್ಮ ವಾಬಾ ತಾಯಮ್ಮ ಪೂಜಾರಿ ನಿಂಗಮ್ಮ ಮ್ಯಾಕಲ್ ಗಂಗಮ್ಮ ಸುರಪುರಕರ್ ಸೇರಿದಂತೆ ಅನೇಕರಿದ್ದರು.