ಸುರಪುರ: ನಗರದ ತಹಸಿಲ್ದಾರ ಕಚೇರಿ ಆವರಣದಲ್ಲಿ ಮಂಗಳವಾರ ರಾಮಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಬೆಂಗಳೂರಿನ ಕೆಜೆಹಳ್ಳಿ ಡಿಜೆಹಳ್ಳಿಯಲ್ಲಿ ನಡೆದ ಪೊಲೀಸರ ಮೇಲೆ ನಡೆದ ದಾಳಿಯನ್ನು ಖಂಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಮ್ ಸೇನಾ ತಾಲೂಕು ಅಧ್ಯಕ್ಷ ಶರಣು ನಾಯಕ ಡೊಣ್ಣಿಗೇರಾ ಮಾತನಾಡಿ, ಬೆಂಗಳೂರಿನ ಕೆಜೆಹಳ್ಳಿ ಡಿಜೆಹಳ್ಳಿಯಲ್ಲಿ ನಡೆದ ದುಸ್ಕೃತ್ಯದಲ್ಲಿ ಎಸ್ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದು ಸರ್ಕಾರಕ್ಕೆ ಆಧಾರ ಸಮೇತವಾಗಿ ಸಿಕ್ಕಿದೆ ಪೊಲೀಸ್ ಠಾಣೆಯ ಮೇಲೆ ದಾಳಿಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದರ ಹಿಂದೆ ಇದೆ ಸಂಘಟನೆಗಳ ಕೈವಾಡ ಇರುವುದು ತಿಳಿದರು ಸಹ ಇನ್ನು ಸರ್ಕಾರ ಈ ಸಂಘಟನೆಗಳನ್ನು ನಿಸೇಧಿಸುವಲ್ಲಿ ಮೀನಾ ಮೇಷ ಎಣಿಸುತ್ತಿದ್ದಾರೆ ಈಗಲಾದರು ಎಚ್ಚೆತ್ತುಕೊಂಡು ಈ ಸಂಘಟನೆಗಳನ್ನು ನಿಸೇಧಿಸಬೇಕು ಎಂದರು.
ನಂತರ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣು ನಾಯಕ ದೀವಳಗುಡ್ಡ ಮಾತನಾಡಿ, ಡಿಜಿಹಳ್ಳಿ ಮತ್ತು ಕೆಜಿಹಳ್ಳಿ ಪ್ರಕರಣಕ್ಕೆ ಕಾರಣರಾದ ಎಲ್ಲರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಬೆಳಗಾವಿಯ ಪೀರನವಾಡಿಯಲ್ಲಿ ತೆರವು ಗೊಳಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಹಾಗೂ ಧಾರವಾಡದ ಬೇಗೂರು ಗ್ರಾಮದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಆರೋಪಿಗೆ ಮರಣದಂಡನೆ ವಿಧಿಸಬೇಕು ಮತ್ತು ಶೃಂಗೇರಿಯ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಬೇರೊಂದು ಧರ್ಮದ ಧ್ವಜ ಹಾರಿಸಿರುವ ಆರೋಪಿಗೆ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ್-೨ ತಹಸಿಲ್ದಾರ್ ಸುಫಿಯಾ ಸುಲ್ತಾನ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸೇನೆಯ ಗೌರವಾಧ್ಯಕ್ಷ ಕುಮಾರ್ ನಾಯಕ, ಶರಣುನಾಯಕ ತಿಮ್ಮಾಪುರ, ಕಾರ್ಯದರ್ಶಿ ಹಯ್ಯಾಳಪ್ಪ ಹಾದಿಮನಿ, ಅನಿಲ್ ಬಿಳಾರ್, ಗುರುನಾಥ್ ಶೀಲವಂತ, ಮಾನು ಕಲಬುರ್ಗಿ, ಶ್ರವಣ ಕುಮಾರ, ಲೋಕೇಶ ಡೊಣ್ಣಿಗೇರಾ, ಹರೀಶ ತ್ರಿವೇದಿ, ರಾಘು ಕೃಷ್ಣಾಪುರ ಸೇರಿದಂತೆ ಇನ್ನಿತರರಿದ್ದರು.