ಸುರಪುರ: ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯ್ನ ಇಂದು ರಾಜ್ಯದಲ್ಲಿ ಪತ್ರಕರ್ತರ ಅನೇಕ ಸಮಸ್ಯೆಗಳಿಗಾಗಿ ಹೋರಾಟ ನಡೆಸುತ್ತಿದೆ.ಅಲ್ಲದೆ ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘಟನೆಗಳ ಒಕ್ಕೂಟದ ಸದಸ್ಯತ್ವ ಹೊಂದಿರುವ ಕರ್ನಾಟಕದ ಏಕಮೇವ ಸಂಘಟನೆ ಎಂದರೆ ಅದು ಕೆಜೆಯು ಆಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ವೀರಣ್ಣ ಕಲಕೇರಿ ಮಾತನಾಡಿದರು.
ಹುಣಸಗಿ ತಾಲೂಕು ಘಟಕ ರಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಇಂದು ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಹೆದರಿಸಬೇಕಾಗಿದೆ.ಅದಕ್ಕಾಗಿ ಇಂದು ಪತ್ರಕರ್ತರ ಸಂಘದ ಅವಶ್ಯಕತೆ ತುಂಬಾ ಇದೆ.ಆ ನಿಟ್ಟಿನಲ್ಲಿ ಇಂದು ಹುಣಸಗಿಯ ಅನೇಕ ಜನ ಪತ್ರಕರ್ತರು ಕೆಜೆಯು ಘಟಕ ರಚನೆ ಮಾಡಿಕೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ ಪಾಟೀಲ ಮಾತನಾಡಿ,ಕೆಲವರು ಜನರಲ್ಲಿ ಗೊಂದಲ ಹುಟ್ಟಿಸಲು ಸಣ್ಣ ಪತ್ರಿಕೆ ದೊಡ್ಡ ಪತ್ರಿಕೆ ಎಂದು ಹೇಳಿಕೊಂಡು ತಿರಗುತ್ತಾರೆ.ಆದರೆ ವರದಿಗಾರರಾದವರು ಸಣ್ಣ ಪತ್ರಿಕೆ ದೊಡ್ಡ ಪತ್ರಿಕೆ ಎಂಬು ಭೇದವಿರುವುದಿಲ್ಲ.ಸುದ್ದಿ ಬರೆಯುವುದು ಮಾತ್ರ ವರದಿಗಾರನ ಕರ್ತವ್ಯವಾಗಿರಲಿದೆ.ಕುಹಕದ ಮಾತುಗಳನ್ನಾಡುವವರ ಬಗ್ಗೆ ಗಮನ ಕೊಡದೆ ಸಮಾಜದ ಏಳಿಗೆಗೆ ಮತ್ತು ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆಗೆ ಗಮನಹರಿಸಿ ಪ್ರಾಮಾಣಿಕವಾಗಿ ವರದಿ ಮಾಡುವಂತೆ ತಿಳಿಸಿ ನಂತರ ಹುಣಸಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.
ಸಭೆಯಲ್ಲಿ ಕೆಜೆಯುನ ರಾಜ್ಯ ಕಾರ್ಯಕಾರಿಣಿ ಸದಸ್ಯ ಪವನ್ ಕುಲಕರ್ಣಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ದೊರೆ,ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ,ಮುಖ್ಯೋಪಾಧ್ಯಾಯ ಟಿ.ಸಿ.ಸಜ್ಜನ್ ವೇದಿಕೆ ಮೇಲಿದ್ದರು. ಸಭೆಯಲ್ಲಿ ಸುರಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ,ಕೆಂಭಾವಿಯ ದುರ್ಗಾಪ್ರಸಾದ, ಶ್ರೀಮಂತ ಚಲುವಾದಿ,ಮನಮೋಹನ ದೇವಾಪುರ, ಸೇರಿದಂತೆ ಅನೇಕ ಜನ ವರದಿಗಾರರಿದ್ದರು. ಬಸವರಾಜ ಮರೊಳ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಬಾಪುಗೌಡ ವಂದಿಸಿದರು.
ಪದಾಧಿಕಾರಿಗಳು: ಬಾಪುಗೌಡ ಪಾಟೀಲ (ಅಧ್ಯಕ್ಷ) ಬಸವರಾಜ ಕಟ್ಟಿಮನಿ (ಉಪಾಧ್ಯಕ್ಷ) ವಿಶ್ವನಾಥ ಮಾರನಾಳ (ಪ್ರ.ಕಾರ್ಯದರ್ಶಿ) ಪ್ರಸಾದ ತೋಳದಿನ್ನಿಮಠ (ಸಹ ಕಾರ್ಯದರ್ಶಿ) ಇವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಯಿತು.