ನಗರದಲ್ಲಿ ಬೀದಿ ಜಾನುವಾರುಗಳ ಕಾಟ ವಾಹನ ಸವಾರರಿಗೆ ಕಿರಿಕಿರಿ

0
76

ಸುರಪುರ: ನಗರದಲ್ಲಿ ಬೀದಿ ಜಾನುರಾರುಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ವಾಹನ ಸವಾರರಿಗೆ ತೀವ್ರ ಕಿರಿ ಕಿರಿ ಉಂಟಾಗಿದೆ.

ನಗರದ ಹೃದಯ ಭಾಗವಾಗಿರುವ ಮಹಾತ್ಮ ಗಾಂಧಿ ವೃತ್ತದಲ್ಲಿ ನಿತ್ಯವು ಹತ್ತಾರು ಜಾನುವಾರುಗಳು ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಮಲಗುವ ಮೂಲಕ ರಸ್ತೆಗಳನ್ನು ಬಂದ್ ಮಾಡಿರುತ್ತವೆ.ಇದರಿಂದ ಬೈಕ್ ಮತ್ತು ಕಾರ್ ಸೇರಿದಂತೆ ಯಾವುದೆ ವಾಹನಗಳು ಬಂದರು ದಾರಿಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.ಅಲ್ಲದೆ ಅನೇಕರು ಬೈಕ್‌ಗೆ ಅಡ್ಡಬಂದು ಡಿಕ್ಕಿ ಹೊಡೆದಿದ್ದರ ಪರಿಣಾಮವಾಗಿ ಲಘು ಅಪಘಾತಕ್ಕೀಡಾಗಿರುವ ಘಟನೆಗಳು ನಡೆದಿವೆ.

Contact Your\'s Advertisement; 9902492681

ಜಾನುವಾರುಗಳ ಹಾವಳಿಯಿಂದ ಸಂಕಷ್ಟ ಹೆದರಿಸಿರುವ ಸಾರ್ವಜನಿಕ ಮಹಾದೇವಪ್ಪ ಬೊಮ್ಮನಹಳ್ಳಿ ಮಾತನಾಡಿ,ದಿನಾಲು ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಜಾನುವಾರುಗಳು ರಸ್ತೆಯಲ್ಲಿ ಅಡ್ಡಲಾಗಿ ಮಲಗಿರುತ್ತವೆ.ವಾಹನಗಳ ಹಾರ್ನ್ ಎಷ್ಟೇ ಶಬ್ದ ಮಾಡಿದರು ಜಪ್ಪಾಯ ಅನ್ನದೆ ಮಲಗಿರುತ್ತವೆ.ಇದರಿಂದ ಬೈಕ್ ಕಾರ್ ಓಡಿಸಿಕೊಂಡು ಹೋಗಲು ನಿತ್ಯವು ಯಾತನೆ ಅನುಭವಿಸುವಂತಾಗಿದೆ.

ಎಲ್ಲೆಂದರಲ್ಲಿ ಜಾನುವಾರುಗಳು ರಸ್ತೆಯಲ್ಲಿ ಮಲಗುವುದರಿಂದ ಜನರ ಓಡಾಟಕ್ಕೆ ಮತ್ತು ಬೈಕ್ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.ಕೂಡಲೆ ನಗರಸಭೆ ಜಾನುವಾರುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು.ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಲಿದ್ದೇವೆ. -ಮಹಾದೇವಪ್ಪ ಬೊಮ್ಮನಹಳ್ಳಿ

ನಗರಸಭೆಯವರು ಈ ಜಾನುವಾರುಗಳನ್ನು ಕೂಡಲೆ ತೆರವುಗೊಳಿಸಿ ಎಲ್ಲಿಯಾದರೂ ಗೋ ಶಾಲೆಗೆ ತೆಗೆದುಕೊಂಡು ಹೋಗಬೇಕು ಇಲ್ಲವಾದರೆ ನಗರದಲ್ಲಿ ಮೈಕ್ ಮೂಲಕ ಪ್ರಚಾರ ನಡೆಸಿ ಜಾನುವಾರುಗಳ ಮಾಲೀಕರು ಅವುಗಳನ್ನು ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳುವಂತೆ ಎಚ್ಚರ ನಿಡಬೇಕು.

ಇಲ್ಲವಾದರೆ ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಮಾಡಬೇಕು.ಇದ್ಯಾವುದನ್ನು ಮಾಡದೆ ನಗರಸಭೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ನಿತ್ಯವು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.ಕೂಡಲೆ ನಗರಸಭೆ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಸಾರ್ವಜನಿಕರು ನಗರಸಭೆ ವಿರುಧ್ಧವೆ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here