- ಬಸವರಾಜ ಸಿನ್ನೂರ.
ಶಹಾಪುರ : ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ, ಬೆಳೆದಿರುವ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿ ರೈತ ಸಂಕಷ್ಟದಲ್ಲಿದ್ದಾನೆ.ಆದ್ದರಿಂದ ಕೃಷಿ ಅಧಿಕಾರಿಗಳು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ರೈತ ಸಂಘದ ಮುಖಂಡರು ಒತ್ತಾಯಿಸಿದರು.
ಪ್ರತಿ ವರ್ಷ ಯಾದಗಿರಿ ಜಿಲ್ಲೆಯಿಂದ ಸುಮಾರು 30 ರಿಂದ 35 ಕೋಟಿಯಷ್ಟು ಬೆಳೆ ವಿಮೆಯ ಹಣ ಸರ್ಕಾರಕ್ಕೆ ಹೋಗುತ್ತಿದ್ದು ಇಲ್ಲಿಯವರೆಗೂ ಒಂದು ನಯಾ ಪೈಸೆ ನಮ್ಮ ಜಿಲ್ಲೆಯ ಹಾಗೂ ತಾಲ್ಲೂಕಿನ ರೈತರಿಗೆ ವಿಮೆ ಹಣ ತಲುಪದಿರುವುದು ದುರದೃಷ್ಟಕರ ಸಂಗತಿ ಎಂದು ರೈತ ಸಂಘದ ಮುಖಂಡರಾದ ಮಹೇಶಗೌಡ ಸುಬೇದಾರ ಹೇಳಿದರು.
ಮೇಲೆ ಮೇಲಿಂದ ರೈತನಿಗೆ ಬರೆ ಎಳೆದಂತಾಗಿದೆ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿರುವ ರೈತರನ್ನು ಪತ್ತೆ ಹಚ್ಚಿ ಕೂಡಲೇ ಅವರಿಗೆ ಪರಿಹಾರವನ್ನು ವಿತರಿಸಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.