ಶಹಾಬಾದ:ಕೇಂದ್ರ ಸರಕಾರ ಬೀದಿ ವ್ಯಾಪಾರಸ್ಥರಿಗೆ ಯಾವುದೇ ಜಾಮೀನಿಲ್ಲದೇ ಹತ್ತು ಸಾವಿರ ರೂವರೆಗೂ ಸಾಲ ನೀಡುತ್ತಿದ್ದು, ಅದರ ಸಂಪೂರ್ಣ ಲಾಭವನ್ನು ವ್ಯಾಪರಸ್ಥರು ಪಡೆದುಕೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ ಹೇಳಿದರು.
ಅವರು ನಗರಸಭೆಯಿಂದ ಆಯೋಜಿಸಲಾದ ಬೀದಿ ವ್ಯಾಪಾರಿಗಳ ಮೇಲ್ ಉತ್ಸುವಾರಿ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೆಗೆದುಕೊಂಡ ಸಾಲವನ್ನು ಅವಧಿಯೊಳಗೆ ಪಾವತಿ ಮಾಡಿದರೇ, ಶೇ 7ರ ಬಡ್ಡಿ ಸಹಾಯ ಧನದ ರೂಪದಲ್ಲಿ ಖಾತೆಗೆ ಜಮೆಯಾಗಲಿದೆ. ತೆಗೆದುಕೊಳ್ಳುವ ಸಾಲಕ್ಕೆ ಯಾವುದೇ ಜಾಮೀನು ಬೇಕಾಗಿಲ್ಲ. ಹತ್ತು ಸಾವಿರ ರೂ. ಸಾಲ ದೊಡ್ಡದಲ್ಲ. ಆದರೆ ಆ ಸಾಲವನ್ನು ಬೇಗನೆ ತೀರಿಸಿದರೇ ಮತ್ತೆ 20 ಸಾವಿರ ಮತ್ತು ಮುಂದೆ ಲಕ್ಷದವರೆಗೂ ಸಾಲ ಪಡೆಯುವಂತ ಅವಕಾಶ ಇದೆ. ಆದ್ದರಿಂದ ಸರಕಾರದ ಯೋಜನೆಯ ಲಾಭವನ್ನು ಪಡೆದುಕೊಂಡು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಮುಂದಾಗಿ ಎಂದು ಹೇಳಿದರು.
ಕಲಬುರಗಿ ಕೌಶಲ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ಸಾತಯ್ಯ ಹಿರೇಮಠ ಮಾತನಾಡಿ,ನಗರಸಭೆಯ ವ್ಯಾಪ್ತಿಯಲ್ಲಿ ಸುಮಾರು 265 ಬೀದಿ ವ್ಯಾಪಾರಿಗಳನ್ನು ಗುರುತಿಸಿ ಸಾಲ ನೀಡಲು ಮುಂದಾಗಿದ್ದೆವೆ.ಸಕರ್ಾರ ಸಾಲ ನೀಡುತ್ತಿದೆ ಎಂದು ಸಾಲ ತೆಗೆದುಕೊಳ್ಳುವುದೊಂದೆ ಆಗಬಾರದು.ತೆಗೆದುಕೊಂಡ ಸಾಲಕ್ಕೆ ಮರುಪಾವತಿಯೂ ಆಗಬೇಕು.ಡಿಜಿಟಲ್ ಪಾವತಿಗೆ ಪ್ರೋತ್ಸಾಹ ಧನ ಸಿಗಲಿದೆ.ಪ್ರತಿಯೊಬ್ಬ ಬೀದಿ ವ್ಯಾಪಾರಿ ತಮ್ಮ ಮೊಬೈಲ್ ಸಂಖ್ಯೆಯನ್ನು ಆದಾರ್ ಲಿಂಕ್ ಮಾಡಿರಬೇಕೆಂದು ಹೇಳಿದರು.
ಕಲಬುರಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕ.ಸುರೇಶಕುಮಾರ, ಎಸ್ ಬಿಐ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ.ವಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಣಮಂತರಾಯ ದೇಗಾಂವ ಮಾತನಾಡಿದರು. ಕೌಶಲ್ಯ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ರಾಜಕುಮಾರ ಗುತ್ತೆದಾರ, ನಗರಸಭೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ರಘುನಾಥ ನರಸಾಳೆ ಹಾಗೂ ಬೀದಿ ವ್ಯಾಪಾರಿಗಳು ಹಾಜರಿದ್ದರು.