ಗುಲಬರ್ಗಾ ಜಿಲ್ಲಾ ಲಾರಿ ಮಾಲಿಕರ ಸಭೆ

0
48

ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿನ ಮಹಾತ್ಮ ಗಾಂಧಿ ತಂಗು ದಾಣದಲ್ಲಿರುವ ಸಾರಿಗೆ ಸದನ ಕಚೇರಿಯಲ್ಲಿ ಗುಲಬರ್ಗಾ ಲಾರಿ ಮಾಲಿಕರ್ ಸಂಘದ ಸಭೆ ಜರುಗಿತು.

ಸಂಘದ ಅಧ್ಯಕ್ಷ ಹಣಮಂತ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪಾಟೀಲ್ ಮಾತನಾಡಿ ಕೋವಿಡ್ ೧೯ ನಿಂದ ಆದ ಭಾರಿ ನಷ್ಟದ ಬಗೆ ಲಾರಿ ಮಾಲಿಕರು ಅನುಭವಿಸಿದ ಸಮಸ್ಯೆಗಳು ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳನ್ನು ಹೆಚ್ಚಾಗುತ್ತಿರುವುದರಿಂದ ಲಾರಿ ಮಾಲೀಕರಿಗೆ ಬಹಳಷ್ಟು ಕಷ್ಟವನ್ನು ಅನುಭವಿಸುವಂತಾಗಿದೆ.

Contact Your\'s Advertisement; 9902492681

ಕೋವಿಡ್-೧೯ನಿಂದ ಸ್ವಲ್ಪ ಹೊರಗೆ ಬಂದೆವು ಎಂದು ಉಸಿರು ಬಿಡುವಷ್ಟರಲ್ಲಿಯೇ ಸರಕಾರವು ಪೇಟ್ರೋಲ್-ಡಿಸೇಲ್ ಬೆಲೆ ಹೆಚ್ಚಿಸುತ್ತಿರುವುದರಿಂದ ಬಹಳಷ್ಠು ನಷ್ಟವನ್ನಾಗುತ್ತಿದೆ. ಆದ್ದರಿಂದ ನಗರದ ಎಲ್ಲಾ ಫೈನಾನ್ಸ್‌ನ ಹಾಗೂ ಬ್ಯಾಂಕ್‌ಗಳ ವ್ಯವಸ್ಥಾಪಕರುಗಳಿಗೆ ಸಭೆಗೆ ಆಹ್ವಾನ ನೀಡಿ ಕರೆಯಿಸಿ ನಷ್ಟದ ಬಗ್ಗೆ ತಿಳಿ ಹೇಳಿ ಮಾಸಿಕ ಕಂತುಗಳ ಬಗ್ಗೆ ಚರ್ಚಿಸಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ಮುಂದಿನ ಮಾಸಿಕ ಕಂತುಗಳನ್ನು ಕಟ್ಟಲು ಸ್ವಲ್ಪ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಟ್ಟು ಲಾರಿ ಮಾಲೀಕರಿಗೆ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ ಖೇಮಜಿ, ಯುನುಸ್ ಖಾನ್, ಜಂಟಿ ಕಾರ್ಯದರ್ಶಿ ಮಹ್ಮದ ಅಷ್ಪಕ್ ಲಾಲ್, ಖಜಾಂಚಿ ಶಿವಕುಮಾರ ಡೊಂಗರಗಾಂವ, ಅಸದುಲ್ಲಾ ಬೇಗ, ಬಸವರಾಜ, ಖಾಜಾ ಪಟೇಲ್, ಶೇರ್‌ಅಲಿ, ಗುಂಡಪ್ಪ ಜನೂರ, ಪೃಥ್ವಿರಾಜ ಗದಲೆಗಾಂವ್, ಬಾಬು ನಾಡತ್, ವಿಜಯಕುಮಾರ ಗುತ್ತೇದಾರ, ನಾಗರಾಜ ಕುಂಬಾರ, ಬಶೇರ ಪಟವಾಡಿ, ಮಹ್ಮದ ಮಂಜೂರ್ ಇಲೈಲಿ, ಶಬ್ಬೀರ ಪಟೇಲ್, ಸೈಯದ ಲಿಯಾಕತ್ ಅಲಿ, ಪ್ರಲ್ಹಾದ ಘನಾತೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here