ಶಹಾಬಾದನಲ್ಲಿ ಬೀದಿನಾಯಿ ಹಾವಳಿಗೆ ಬೇಸತ್ತ ಜನರು

0
87

ಶಹಾಬಾದ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಜನ ಓಡಾಡುವುದೇ ಕಷ್ಟ ಎಂಬ ಸ್ಥಿತಿ ಉಂಟಾಗಿದೆ.ಅದರಲ್ಲೂ ಮಕ್ಕಳು-ಮಹಿಳೆಯರಂತೂ ಕೈಯಲ್ಲಿ ಜೀವ ಹಿಡಿದುಕೊಂಡು ಭಯದಲ್ಲೇ ಓಡಾಡಬೇಕಿದೆ.

ನಗರದ ರೇಲ್ವೆ ಸ್ಟೇಶನ್ ರಸ್ತೆ, ಹೊನಗುಂಟಾ ವೃತ್ತ, ಶ್ರೀರಾಮ ವೃತ್ತ, ತ್ರಿಶೂಲ ವೃತ್ತ, ಶಾಸ್ತ್ರಿ ವೃತ್ತ, ಮಿಲತ್ ನಗರ, ರಾಮಾ ಮೊಹಲ್ಲಾ ಸೇರಿದಂತೆ ಇತರ ಬಡಾವಣೆ ಮತ್ತು ಬೀದಿಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಅಲ್ಲಲ್ಲಿ ಗುಂಪು-ಗುಂಪಾಗಿ ಸಾಗುವ ಶ್ವಾನಗಳ ಹಿಂಡು ದಾರಿಯಲ್ಲಿ ಸಾಗುವವರನ್ನು ಕಂಡ ಕೂಡಲೇ ಬೊಗಳುತ್ತ ಕಚ್ಚಲು ಮುಂದಾಗುತ್ತಿವೆ.ಇದರಿಂದ ರಸ್ತೆಯಲ್ಲಿ ನಾಯಿಗಳಿವೆಯೇ ಇಲ್ಲವೇ ಎಂಬುದನ್ನು ನೋಡುತ್ತ ಭಯದಲ್ಲೇ ಓಡಾಡುವಂತಾಗಿದೆ.

Contact Your\'s Advertisement; 9902492681

ಬೆಳಿಗ್ಗೆ ಮಕ್ಕಳು ಅಂಗಡಿಗಳಿಗೆ ಬಿಸ್ಕೀಟ, ಬ್ರೆಡ್, ಹಾಲು ತರಲು ಮನೆಯಿಂದ ಹೊರಗೆ ಕಳುಹಿಸಲು ಪಾಲಕರು ಭಯಪಡುವಂತಾಗಿದೆ.ಮಕ್ಕಳು ಮನೆಯ ಮುಂದೆ ಆಟವಾಡಲು ಹೋದಾಗ ಬೀದಿ ನಾಯಿಗಳ ಉಪಟಳಕ್ಕೆ ಒಳಗಾಗಿದ್ದಾರೆ.ಮಕ್ಕಳು ಮನೆಗೆ ಬರುವವರೆಗೂ ಪೋಷಕರು ಜೀವ ಕೈಲ್ಲಿ ಹಿಡಿದುಕೊಂಡು ಕಾಯುವಂತಾಗಿದೆ.ಬೆಳ್ಳಂಬೆಳಿಗ್ಗೆ ನಾಯಿಗಳು ಸಾಲುಸಾಲಾಗಿ ರಸ್ತೆಗಿಳಿಯುತ್ತವೆ.ರಾತ್ರಿ ಸಂದರ್ಭದಲ್ಲಿ ಒಬ್ಬರೆ ಸಂಚರಿಸುವಾಗ ಒಮ್ಮೆಲೆ ದಾಳಿ ಮಾಡುತ್ತವೆ.ಬೈಕ್ನಲ್ಲಿ ಹೋಗುತ್ತಿರುವಾಗಲೂ ದಾಳಿ ಮಾಡುತ್ತಿವೆ.ಈಗಾಗಲೇ ಅನೇಕ ಜನರೂ ನಾಯಿಯಿಂದ ಕಚ್ಚಿಸಿಕೊಂಡಿದ್ದಾರೆ ಮತ್ತು ಸದ್ಯ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾಯಿಗಳ ಹಾವಳಿ ವಿರುದ್ಧ ಕ್ರಮ ಕೈಗೊಳ್ಳ ನಗರಸಭೆಯ ಅಧಿಕಾರಿಗಳ ವಿರುದ್ಧ ಜನ ಶಾಪ ಹಾಕುತ್ತಿದ್ದಾರೆ.

ಬೈಕ್ನಲ್ಲಿ ಹೋಗುವ ವೇಳೆಯಲ್ಲಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ.ಬೆಳಗಿನ ಜಾವ ಹಾಲು ಹಾಗೂ ದಿನ ಪತ್ರಿಕೆ ವಿತರಕರಿಗೂ ನಾಯಿಕಾಟ ತಪ್ಪಿಲ್ಲ.ಅಲ್ಲದೇ ಕಲ್ಯಾಣ ಮಂಟಪ, ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಹಾಘೂ ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ನಾಯಿಗಳ ಹಾವಳಿಗೆ ಕಾರಣವಾಗಿದೆ.ನಾಯಿಗಳ ಹಾವಳಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂತಾನ ಹರಣ ಚಿಕಿತ್ಸೆಗಳನ್ನು ಮಾಡಿಸುವುದು ಸೇರಿದಂತೆ ಹಲವು ಮಾರ್ಗೋಪಾಯಗಳನ್ನು ನಗರಸಭೆಯ ಅಧಿಕಾರಿಗಳು ಕೈಗೊಂಡು ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಸದ್ಯದಲ್ಲೇ ಅವುಗಳ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು- ಕೆ.ಗುರಲಿಂಗಪ್ಪ ಪೌರಾಯುಕ್ತ ನಗರಸಭೆಯ ಶಹಾಬಾದ.

ಬೆಳಗಿನ ಜಾವದಲ್ಲಿ ಪತ್ರಿಕೆಗಳನ್ನು ಹಂಚಲು ಹೋಗುವ ವೇಳೆ ನಾಯಿಗಳು ದಾಳಿ ಮಾಡುತ್ತಿವೆ.ಇದರಿಂದಾಗಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು- ಶರಣಬಸಪ್ಪ ಕಡಗಂಚಿ ಪತ್ರಿಕೆ ವಿತರಕ.

ಇತ್ತಿಚ್ಚಿಗಷ್ಟೇ ನಗರದ ಕುಮಸುಮ್ ಎಂಬ ಐದು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾದ ಗಾಯಗಳಾದ ಘಟನೆ ನಡೆದಿವೆ.ಆದ್ದರಿಂದ ತಹಸೀಲ್ದಾರರು ಮತ್ತು ನಗರಸಭೆಯ ಪೌರಾಯುಕ್ತರು ನಾಯಿಗಳ ಹಾವಳಿಯನ್ನು ತಪ್ಪಿಸಬೇಕು.ಸಾರ್ವಜನಿಕರ ಸುಗಮ ಓಡಾಟಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು- ಮೆಹಬೂಬ ಬಂಗಡಿ ನಗರದ ನಿವಾಸಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here