ಸೇವಾ ಭದ್ರತೆ-ನಿವೃತ್ತಿ ವೇತನ ನೀಡುವಂತೆ ಭದ್ರೆ ಮನವಿ

1
183

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ವೃತ್ತಿ ಶಿಕ್ಷಣ (ಜೆಓಸಿ) ಕೋರ್ಸಿನ ಶಿಕ್ಷಖ ಮತ್ತು ಶಿಕ್ಷಕೇತರು ಸುಮಾರು ೩೫೦೦ ಜನ ಶಿಕ್ಷಕರು ಮತ್ತು ಶಕ್ಷಕೇತರು ಸುಮಾರು ೩೦ ವರ್ಷಗಳ ಕಾಲ ಅತೀ ಕಡಿಮೇ ವೇತನ ಪಡೆದು ಸುಮಾರು ಒಂದು ವರ್ಷಕ್ಕೆ ೭೦,೦೦೦ ಸಾವಿರ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದಾರೆ. ವೃತ್ತಿಪರ ಶಿಕ್ಷಣ ಕೋರ್ಸ್ ಸರಕಾರವು ೨೦೧೧ ರಲ್ಲಿ ರದ್ದು ಮಾಡಿದೆ ಆದ್ದರಿಂದ ಸಿಬ್ಬಂದಿಗಳಿಗೆ ಸೇವಾ ಭದ್ರತೆ-ನಿವೃತ್ತಿ ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)ಯ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ್ ಭದ್ರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಸರಕಾರವು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳಿಗೆ ಸರಕಾರವು ೨೦೧೩ ರಲ್ಲಿ ಖಾಯಂಗೊಳಿಸಿತ್ತು. ಆದರೆ ಖಾಯಂಗೊಮಡ ಸಿಬ್ಬಂದಿಗಳಿಗೆ ಅವರು ಸೇವೆಗೆ ಸೇರಿದ ದಿನಾಂಕದಿಂದ ಸೇವಾಭದ್ರತೆ ಮತ್ತು ಪಿಂಚಣಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲಾಗಿದೆ ಹಾಗೂ ಸಿಬ್ಬಂದಿಗಳು ಸೇವೆಯಲ್ಲಿ ಮೃತಪಟ್ಟರೆ ಅವರ ಕುಟುಂಬ ವರ್ಗದಲ್ಲಿ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ನೌಕರಿಗೆ ತೆಗೆದುಕೊಳ್ಳುವ ನಿಯಮ ಇರುವುದಿಲ್ಲ. ಈಗಾಗಲೇ ಅನೇಕ ಸಿಬ್ಬಂದಿಗಳು ಮೃತಪಟ್ಟಿದ್ದಾರೆ.

Contact Your\'s Advertisement; 9902492681

ಕೆಲವರು ಕೋವಿಡ್-೧೯ ರಿಂದ ಮೃತ ಪಟ್ಟಿದ್ದಾರೆ ಇವರಿಗೆ ಭದ್ರತೆಯ ಯಾವ ಅನುಕೂಲ ಆಗಿರುವುದಿಲ್ಲ. ಮೃತಪಟ್ಟ ಮತ್ತು ನಿವೃತ್ತಿ ಹೊಂದಿದ್ದ ಕುಟುಂಬವರ್ಗದ ಸಿಬ್ಬಂದಿಗಳ ಕುಟುಂಬ ಅತಂತ್ರಸ್ಥಿತಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾತವಿಯತೆ ಮತ್ತು ಅವರ ಸೇವೆಯನ್ನು ಪರಿಗಣಿಸಿ ಸರಕಾರ ಕೂಡಲೇ ಇವರಿಗೆ ಸೇವೆಗೆ ಸೇರಿದ ದಿನಾಂಕದಿಂದು ಸೇವಾಭದ್ರತೆ ಮತ್ತು ಪಿಂಚಣಿ ಸೌಲಭ್ಯ ಹಾಗೂ ಸೇವೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಅನುಕಂಪ ಆಧಾರದ ಮೇಲೆ ಸರಕಾರಿ ನೌಕರಿಗೆ ತೆಗೆದುಕೊಳ್ಳಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ ಎಂದು ಭದ್ರೆ ಹೇಳಿದರು.

ಸರಕಾರ ಸದರಿ ಸಿಬ್ಬಂದಿ ವರ್ಗದವರಿಗೆ ನ್ಯಾಯ ಒದಗಿಸಿಕೊಡದೇ ಹೋದಲ್ಲಿ, ಮೃತ ಕುಟುಂಬದವರ ಜೊತೆಗೂಡಿ ಮೃತಪಟ್ಟ ಸಿಬ್ಬಂದಿಯ ಶವದೊಂದಿಗೆ ಚಳುವಳಿ ರೂಪಿಸಬೇಕಾಗುತ್ತದೆ ಸರಕಾರ ಕೂಡಲೇ ಇವರಿಗೆ ನ್ಯಾಯ ಒದಗಿಸಿಕೊಡಬೇಕು ಪತ್ರಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here