ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸವಾದಿ ) ಪಕ್ಷ ಜಿಲ್ಲೆಯಾದ್ಯಂತ ಇಂದಿನಿಂದ ಆಗಷ್ಠ್ 24 ರಿಂದ 29ರ ವರೆಗೆ ಪ್ರತಿಭಟನಾ ಸಪ್ತಾಹ ನಡೆಸಲು ಕರೆ ನೀಡಿರುವ ಹಿನ್ನೆಯಲ್ಲಿ ಇಂದು ಜಿಲ್ಲೆಯ ಕಾಳಗಿ ತಹಶೀಲ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು..
ಕೋವಿಡ್ – 19 ವೈರಾಣುವನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ವಹಿಸದೇ ಜನತೆಯನ್ನು ಸಂಕಷ್ಟದಲ್ಲುಳಿಯಲು ಬಿಟ್ಟಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಹಾಗೂ ದೇಶ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಬಿಕ್ಕಟ್ಟಿನಿಂದ ಇಡೀ ದೇಶವನ್ನು ಪಾರು ಮಾಡುವ ನೀತಿಗಳ ಬದಲು ಕೇವಲ ದೊಡ್ಡ ಬಂಡವಾಳದಾರರು ಹಾಗೂ ಕಾರ್ಪೋರೇಟ್ ಕಂಪನಿಗಳ ಹಿತಗಳನ್ನು ರಕ್ಷಿಸಲು ಕೇಂದ್ರ ಸರಕಾರ ಮುಂದಾಗುತ್ತಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಪ್ರತಿಭಟನೆಯಲ್ಲಿ ಆರೋಪಿಸಿದರು.
ಕೋಟಿ ರೂಗಳ ಸಾರ್ವಜನಿಕ ಬ್ಯಾಂಕುಗಳ ಸಾಲ ಮತ್ತು ತೆರಿಗೆ ಬಾಕಿ ಮನ್ನಾಮಾಡಲಾಗಿದೆ. ದೇಶಕ್ಕೆ ಭಾರಿ ಲಾಭ ನೀಡುವ ಬಿಎಸ್ ಎನ್ ಎಲ್, ಬ್ಯಾಂಕ್, ವಿಮೆ, ರೈಲ್ವೇ, ವಿಮಾನ ನಿಲ್ದಾಣಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಅಕ್ರಮ ಬೆಲೆಗೆ ದಾನ ನೀಡುತ್ತಿದೆ. ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುತ್ತಿದೆ ಎಂದು ದುರಿದರು.
ವ್ಯತಿರಿಕ್ತವಾಗಿ, ಒಟ್ಟು ಆರ್ಥಿಕ ಮತ್ತು ಕೈಗಾರಿಕಾ ಹಾಗೂ ಕೃಷಿ ಬಿಕ್ಕಟ್ಟಿನಿಂದ ಬಳಲುತ್ತಿರುವ ಒಟ್ಟು ದೇಶದ ರೈತರು, ಕೃಷಿಕೂಲಿಕಾರರು, ಕಾರ್ಮಿಕರು, ಮದ್ಯಮ ವರ್ಗದ ಜನತೆ, ಸಣ್ಣ ವ್ಯಾಪಾರಿಗಳನ್ನು ಅದರಿಂದ ಹೊರ ತರುವುದನ್ನು ಉಪೇಕ್ಷಿಸಲಾಗಿದೆ. ಮಾತ್ರವಲ್ಲಾ, ಒಟ್ಟು ಆರ್ಥಿಕ ಬಿಕ್ಕಟ್ಟು ಮತ್ತಷ್ಠು ಆಳಗೊಳ್ಳಲು ಬಿಡಲಾಗಿದೆ. ಇದರಿಂದ ನಿರುದ್ಯೋಗ, ಬಡತನ ಮತ್ತು ದಲಿತರು ಹಾಗೂ ಮಹಿಳೆಯರ ಮೇಲಿನ ಸಾಮಾಜಿಕ ದೌರ್ಜನ್ಯಗಳು, ಆತ್ಮಹತ್ಯೆಗಳು, ಹಸಿವಿನ ಸಾವುಗಳು ವ್ಯಾಪಕವಾಗುತ್ತಿವೆ ಎಂದು ತಿಳಿಸಿದರು.
ಇದೇ ಸಂಕಷ್ಠದ ಸಂದರ್ಭದಲ್ಲಿ ಜನತೆಯ ಒಡೆದಾಳುವ ನೀತಿಗಳನ್ನು ಆಳಗೊಳಿಸಲಾಗುತ್ತಿದೆ, ಹೇರಲಾಗುತ್ತಿದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸಲಾಗುತ್ತಿದೆ. ರಾಜ್ಯ ಸರಕಾರಗಳ ಮತ್ತು ಸ್ವಾಯತ್ತ ಸಂವಿಧಾನಿಕ ಸಂಸ್ಥೆಗಳ ಹಕ್ಕುಗಳನ್ನು ದಮನ ಮಾಡಿ, ಸರ್ವಾಧಿಕಾರಗಳನ್ನು ಹೇರಲಾಗುತ್ತಿದೆ ಎಂದು ಹೇಳಿದರು.
ಜನ ವಿರೋಧಿ ನೀತಿಗಳನ್ನು ವಿರೋಧಿಸುವುದು ಮತ್ತು ಜನತೆಯ ತಲಾ ಆದಾಯವನ್ನು ಈ ಸಂದರ್ಭದಲ್ಲಿ ಹೆಚ್ಚಿಸಿಕೊಂಡು, ಆ ಮೂಲಕ ಕೋವಿಡ್ – 19 ರ ವಿರುದ್ದ ತಮ್ಮ ಆರೋಗ್ಯ ರಕ್ಷಿಸಿ ಕೊಳ್ಳಲು ಮತ್ತು ದೇಶದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅಗತ್ಯವಾದ ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂಗಳ ಮಾಸಿಕ ಸಹಾಯಧನ ಮತ್ತು ತಲಾ ವ್ಯಕ್ತಿಗೆ 10 Kg ಸಮಗ್ರ ಪಡಿತರವೂ ಸೇರಿದಂತೆ 16, ಹಕ್ಕೊತ್ತಾಯಗಳಿಗಾಗಿ ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿಯು ಪ್ರತಿಭಟನಾ ಸಪ್ತಾಹವನ್ನು ಸಂಘಟಿಸುತ್ತಿದೆ ಎಂದು ತಿಳಿಸಿದ ಅವರು ಜನರು ಬೆಂಬಲಿಸಿ ಸಪ್ತಾಹದಲ್ಲಿ ಗಿಯಾಗಲು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಸಿಪಿಐಎಂ ತಾಲೂಕು ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ರೈತರು ಇದ್ದರು.