ಸುರಪುರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸರಕಾರಕ್ಕೆ ಎಬಿವಿಪಿ ಮನವಿ

0
32

ಸುರಪುರ: ಅನೇಕ ಐತಿಹಾಸಿಕ ದಾಖಲೆಗಳನ್ನು ಹೊಂದಿರುವ ಸುರಪುರ ತಾಲೂಕಿನಲ್ಲಿ ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯದ ಸ್ಥಾಪಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ನಗರಕ್ಕೆ ಆಗಮಿಸಿದ್ದ ಕಂದಾಯ ಸಚಿವ ಆರ್.ಅಶೋಕ ಅವರ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಎಬಿವಿಪಿ ಕಲಬುರ್ಗಿ ವಿಭಾಗದ ಸಹ ಪ್ರಮುಖ ಡಾ: ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ಸುರಪುರ ತಾಲೂಕು ಅನೇಕ ಐತಿಹಾಸಿಕ ಹಿನ್ನೆಗಳನ್ನು ಹೊಂದಿರುವಂತ ತಾಲೂಕಾಗಿದೆ.ಕೊಡೇಕಲ್‍ನ ಕಾಲಜ್ಞಾನಿ ಬಸವಣ್ಣ ಲೋಕದ ಕುರಿತು ಕಾಲಜ್ಞಾನ ರಚಿಸಿದ್ದಾರೆ.

Contact Your\'s Advertisement; 9902492681

ಅಲ್ಲದೆ ಅನೇಕ ಜೈನ ಧರ್ಮದ ದೇವಾಲಯಗಳು ಹಾಗು ಋಷಭನಾಥ ಮಹಾವೀರರ ಮೂರ್ತಿಗಳು ಇದೇ ತಾಲೂಕಿನಲ್ಲಿ ದೊರೆತಿವೆ.ಸುರಪುರ ಸಂಸ್ಥಾನವು ಐತಿಹಾಸಿಕ 12 ಜನ ಅರಸರು ಆಳ್ವಿಕೆ ನಡೆಸಿದ್ದು,ಅಲ್ಲದೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ್ದು ಸುರಪುರ ಅರಸರು.ಅಲ್ಲದೆ 15ನೇ ಶತಮಾನದಲ್ಲಿ ಮೋಘಲರು ಮತ್ತು ಬ್ರಿಟೀಷರ ವಿರುಧ್ಧ ಹೋರಾಡಿದ ವೀರಭೂಮಿ ಸುರಪುರ ಇತಿಹಾಸಕ್ಕಿದೆ ಇಂತಹ ಅನೇಕ ಸಂಗತಿಗಳ ಕುರಿತು ಜಗತ್ತಿಗೆ ತಿಳಿಯಲು ತಾಲೂಕಿನಲ್ಲಿ ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯ ಸ್ಥಾಪನೆ ಅವಶ್ಯವಾಗಿದೆ.ಇದಕ್ಕೆ ಸರಕಾರ ಮುತುವರ್ಜಿ ವಹಿಸಿ ಸ್ಥಾಪಿಸಿದಲ್ಲಿ ಸುರಪುರ ಇತಿಹಾಸ ಅಜರಾಮರವಾಗಿ ಉಳಿಯಲಿದೆ ಎಂದರು.

ನಂತರ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಾಗು ಎಬಿವಿಪಿಯ ಕಲಬುರ್ಗಿ ವಿಭಾಗಿಯ ಸಹ ಸಂಚಾಲಕ ನಾಗರಾಜ ಮಕಾಶಿ,ನಗರ ಕಾರ್ಯದರ್ಶಿ ಪರಶುರಾಮ ಬೈಲಕುಂಟಿ ಕ್ಯಾತಪ್ಪ ಮೇದಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here