ಶಹಾಬಾದ: ಭಾವಚಿತ್ರವುಳ್ಳ ಮತದಾರರ ಪಟ್ಟಿ ತಯಾರಿಕೆ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, 2021ರ ಜನೇವರಿ 1ಕ್ಕೆ 18 ವರ್ಷ ಪೂರೈಸಿದ ಕ್ಷೇತ್ರದ ವ್ಯಾಪ್ತಿಯ ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಅರ್ಹ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳಿಗೆ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಹೆಸರು ತಿದ್ದುಪಡಿ, ಬದಲಾವಣೆ, ಸ್ಥಳಾಂತರ ಇದ್ದಲಿ ನಿಗದಿ ಪಡಿಸಿದ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಚುನಾವಣೆ ಆಯೋಗದ ಅರ್ಹತಾ ದಿನಾಂಕ 1.1.2021 ಆಧರಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗಳಿಗಾಗಿ ಆಗಸ್ಟ್ 10 ರಿಂದ 31ರ ವರೆಗೆ ಮತದಾನ ಕೇಂದ್ರಗಳಲ್ಲಿ ಹೆಸರು ತೆಗೆದು ಹಾಕುವುದು, ಹೊಸದಾಗಿ ಸೇರ್ಪಡೆ ಕಾರ್ಯ ನಡೆಸಲಾಗುತ್ತದೆ. ನವೇಂಬರ್ 1 ರಿಂದ 15ರ ವರೆಗೆ ನಮೂನೆಗಳು ತಿದ್ದುಪಡಿ ಕಾರ್ಯ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟಣೆ ಪೂರ್ವ ಸಿದ್ಧತೆ ಕೈಗೊಂಡು ನವೆಂಬರ್ 16ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ನವೆಂಬರ್ 16ರಿಂದ ಡಿಸೆಂಬರ 15ರ ವರೆಗೆ ಕರಡು ಮತದಾರರ ಪಟ್ಟಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ನಂತರ ಮುಖ್ಯ ಚುನಾವಣಾಧಿಕಾರಿ ಕರನಾಟಕ ಇವರು ಸೂಚಿಸುವ ಎರಡು ಶನಿವಾರ ಭಾನುವಾರಗಳಿಂದ ವಿಶೇಷ ಆಂದೋಲನ ಕೈಗೊಂಡು ಕರಡು ಮತದಾರರ ಪಟ್ಟಿಗೆ ಸ್ವೀಕೃತ ಆಕ್ಷೇಪಣೆಗಳನ್ನು ವಿಲೆವಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
2021 ಜನವರಿ 5 ರೊಳಗಾಗಿ ವಿಲೇವಾರಿ ಮಾಡಲಾಗುವುದು ಜನವರಿ 14ರ ಒಳಗಾಗಿ ಚುನಾವಣೆ ಆಯೋಗದಿಂದ ಅನುಮತಿ ಪಡೆದುಕೊಂಡು ಜನವರಿ 15ರಿಂದ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.