ವಚನ ಸಾಹಿತ್ಯ ಬಸವಾದಿ ಶರಣರು ಜಗತ್ತಿಗೆ ನೀಡಿದ ಮಹತ್ತರ ಕೊಡುಗೆ: ಸತ್ಯಂಪೇಟೆ

0
46

 

ಸುರಪುರ: ಬಸವಣ್ಣನವರು ಮತ್ತು ಬಸವಾದಿ ಶರಣರು ಈ ನಾಡಿಗೆ ಮಹತ್ತರವಾದ ಕೊಡುಗೆ ನೀಡಿದ ವಚನ ಸಾಹಿತ್ಯ ಸರ್ವಕಾಲಕ್ಕು ಪ್ರಸ್ತುತವಾಗಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟ ಹೆಳಿದರು.

Contact Your\'s Advertisement; 9902492681

ತಾಲೂಕಿನ ಲಕ್ಷ್ಮೀಪುರದ ಮರಡಿ ಮಲ್ಲಿಕಾರ್ಜುನ ಶ್ರೀ ಮಠದ ಸಭಾಂಗಣಾದಲ್ಲಿ ಇಂದು ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ಸುರಪುರ ತಾಲೂಕಾ ಘಟಕದ ವತಿಯಿಂದ ಏರ್ಪಡಿಸಿದ್ದ ವಚನದಿನ ಕಾರ್ಯಕ್ರಮದಲ್ಲಿ ವಚನಸಾಹಿತ್ಯದ ಪ್ರಸ್ತುತತೆ ಕುರಿತು ಉಪನ್ಯಾಸನಿಡಿ ಮಾತನಾಡಿದ ಅವರು, ವಚನ ಸಾಹಿತ್ಯವು ಮಾನವಿಯ ಮೌಲ್ಯಗಳ ಸಂಗಮವಾಗಿದೆ ಜೊತೆಗೆ ವಚನಸಾಹಿತ್ಯ ನಮಗೆ ಬದುಕನ್ನು ಕಟ್ಟಿಕೊಡುತ್ತದೆ ಹಾಗೂ ನಮ್ಮ ಬದುಕಿನ ಪ್ರತಿ ಗಳಿಗೆಗೂ ವಚನಗಳ ಸಾರ ಅನ್ವಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚಾಗಿ ಶರಣ ಸಾಹಿತ್ಯ ಮತ್ತು ವಚನಸಾಹಿತ್ಯದ ಅದ್ಯಾಯನಮಾಡುವುದು ಪ್ರಸ್ತುತ ಸಂದರ್ಭಕ್ಕೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞ ಜೊತೆಗೆ ಸಾಂಸ್ಕೃತಿಕ ಸ್ಥಿತಿ, ವ್ಯಕ್ತಿತ್ವ ವಿಕಸನ ಈ ಎಲ್ಲವುಗಳ ಬಲವರ್ಧನೆಯಲ್ಲಿ ವಚನಸಾಹಿತ್ಯದ ಕೊಡುಗೆ ಮಹತ್ತರವಾಗಿದೆ ಎಂದು ಹೆಳಿದರು.

ಸಮಾರಂಭವನ್ನು ಉದ್ಘಾಟಿಸಿದ ಶ್ರೀಗೀರಿ ಮಠದ ಪೂಜ್ಯಶ್ರೀ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಬಸವಾದಿ ಶರಣರ ಮಾರ್ಗದಲ್ಲಿ ನಾವೆಲ್ಲ ಮುನ್ನಡೆಯಬೇಕು ಅಂದಾಗ ಬದುಕು ಹಸನಗೊಳಿಸಿಕೊಳ್ಳಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ವೀರಭದ್ರಪ್ಪ ಕುಂಬಾರ, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಪ್ರದೀಪ ಕದರಾಪುರ ಪಾಲ್ಗೊಂಡಿದ್ದರು, ತಾಲೂಕ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಶರಣಸಾಹಿತ್ಯ ಪರಿಷತ್ತಿನ 33ನೇ ವರ್ಷದ ಸಂಸ್ಥಾಪನಾದಿನ ಹಾಗೂ ಲಿಂಗೈಕ್ಯ ಸುತ್ತುರು ಶಿವರಾತ್ರಿ ಸ್ವಾಮಿಜಿಗಳ ಜನ್ಮದಿನವನ್ನು ಆಚರಿಸಲಾಯಿತು ಹಾಗು ಇದೆ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳಿಂದ ವಚನ ಕಂಟಪಾಠ ಸ್ಪರ್ದೆ ಹಾಗೂ ವಿಧ್ಯಾರ್ಥಿನಿಯರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವರಾಜ ಕಲಿಕೇರಿ, ಮಲ್ಲುಬಾದ್ಯಾಪೂರ, ಅಂಬ್ರೇಶ ಕುಂಬಾರ, ಸಿದ್ದಣಗೌಡ ಹೆಬ್ಬಾಳ, ರಾಘವೇಂದ್ರ ಲಕ್ಷ್ಮೀಪೂರ, ರವಿ ಗೌಡ ಹೆಮನೂರು, ಪ್ರವೀಣ ಜಕಾತಿ, ಸಿದ್ದಪ್ರಸಾದ ಪಾಟೀಲ್ ಸೇರಿದಂತೆ ಇತರರಿದ್ದರು. ಕಾರ್ಯಕ್ರಮವನ್ನು ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಚಂದ್ರಶೇಖರ ಡೊಣ್ಣುರು ಸ್ವಾಗತಿಸಿದರು, ಮೌನೇಶ ಐನಾಪುರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here