ಹಾಳಾದ ರಸ್ತೆಯಲ್ಲಿ ನಗರಸಭೆಯಿಂದ ಟೂಥ್ ಪಾಲಿಷ್ ಕೆಲಸ

0
73

ಶಹಾಬಾದ:ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ಕಳಪೆ ರಸ್ತೆ ಕಾಮಗಾರಿಯಿಂದ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ರಸ್ತೆಯಲ್ಲಿನ ಹೊಂಡಗಳಿಗೆ ಕಂಕರ್ ತುಂಬುವ ಕಾರ್ಯಕ್ಕೆ ನಗರಸಭೆಯ ಅಧಿಕಾರಿಗಳು ಮುಂದಾಗಿರುವುದಕ್ಕೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಗಲೀಕರಣ ಮಾಡಲು ಹೋಗಿ ಸಂಪೂರ್ಣ ರಸ್ತೆಯನ್ನೇ ಗುತ್ತಿಗೆದಾರ ಹಾಳು ಮಾಡಿದ್ದಾನೆ. ರಸ್ತೆ ಕಿತ್ತು ಹೋದರೂ ಇಲ್ಲಿನ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದರು. ಇತ್ತಿಚ್ಚಿಗಷ್ಟೇ ಬಂದ ನೂತನ ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ ಟೂಥ್ ಪಾಲಿಷ್ ಕೆಲಸಕ್ಕೆ ಮುಂದಾಗಿರುವುದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಟೂಥ್ ಪಾಲಿಷ್ ಕೆಲಸಗಳು ಹಲವು ಬಾರಿ ಮಾಡಿದ್ದಾರೆ. ಕೋಟಿಗಟ್ಟಲೇ ಬಂದ ಅನುದಾನದಿಂದ ಮಾಡಿದ ರಸ್ತೆಯೇ ಹಾಳಾಗಿರುವಾಗ ಟೂಥ್ ಪಾಲಿಷ್ ಕೆಲಸದಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಸಾರ್ವಜನಿಕರದಾಗಿದೆ.

Contact Your\'s Advertisement; 9902492681

ಕಳಪೆ ಕಾಮಗಾರಿಯಿಂದ ಇಲ್ಲಿನ ರಸ್ತೆ ಇನ್ನೂ ನಿರ್ಮಾಣ ಹಂತದಲ್ಲೇ ಹಾಳಾಗಿ ಹೋದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲವೆಂಬುದು ಅನುಮಾನ ಹುಟ್ಟಿಸುತ್ತಿದೆ. ಅಲ್ಲದೇ ಶಾಸಕ ಬಸವರಾಜ ಮತ್ತಿಮಡು ಅವರು ಯಾಕೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ. ಈಗಾಲೇ ಕಂಕರ್ ತಂದು ಒಂದು ಹೊಂಡದಲ್ಲಿ ಹಾಕಿ ಸಮತಟ್ಟು ಮಾಡದೇ ಹೋಗಿದ್ದಾರೆ. ಇದು ಕೂಡ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಮತ್ತೆ ಹೊಸ ರಸ್ತೆ  ಮಾಡಿದರೇ ಮಾತ್ರ ಪರಿಹಾರ.ಆದ್ದರಿಂದ ಶಾಸಕರು ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕು.ಹೊಸದಾಗಿ ಮತ್ತೆ ರಸ್ತೆ ನಿರ್ಮಾಣ ಮಾಡಕೆಂಬುದೇ ಸಾರ್ವಜನಿಕರ ಒತ್ತಾಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here