ಮಾಲೂರು: ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮದಲ್ಲಿ ಇಂದು ಬೆಳ್ಳಾವಿ ಮಠದ ಬೆಳ್ಳಂಪುರಿ ಸ್ವಾಮೀಜಿ ರವರ ನೇತೃತ್ವದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎನ್.ಹರೀಶ್ ಕುಮಾರ್ ಹಾಗೂ ಕಾರ್ಯದರ್ಶಿಗಳಾದ ಎಂ.ಗೋಪಾಲ್ ರವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ತೊರ‍್ನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಇಂದು ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಇಷ್ಟು ದಿನ ತೊರ‍್ನಹಳ್ಳಿ ಗ್ರಾಮ ಹಾಗೂ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಮಾಲೂರು ತಾಲ್ಲೂಕಿನ ಮಡಿವಾಳ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಆಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎನ್. ಹರೀಶ್ ಕುಮಾರ್ ಇವರಿಗೆ ಊರಿನ ಗ್ರಾಮಸ್ಥರು, ಪಂಚಾಯತಿ ಮಾಜಿ ಸದಸ್ಯರು ಇಂದು ಸರಳವಾಗಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡು ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಎನ್ ಹರೀಶ್ ಕುಮಾರ್ ಮಾತನಾಡಿ ಇಷ್ಟು ದಿನ ನನಗೆ ಉತ್ತಮ ಸಹಕಾರ ನೀಡಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಕರಿಸಿದ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಹಾಗೂ ಊರಿನ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಂದರು.
ಇದೇ ಸಂದರ್ಭದಲ್ಲಿ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಂ.ಗೋಪಾಲ್ ಅವರನ್ನು ಸನ್ಮಾನಿಸಿ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಎಂ.ಗೋಪಾಲ್ ರವರು ಮಾತನಾಡಿ, ಪಂಚಾಯತಿಯ ಎಲ್ಲಾ ಸಿಬ್ಬಂದಿ ಒಂದು ಕುಟುಂಬದವರಂತೆ ಸೇವೆ ಸಲ್ಲಿಸಿದ್ದೇವೆ. ತೊರ‍್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಉತ್ತಮ ಕೆಲಸಗಳು ನಡೆದಿದ್ದು , ಜನರು ನಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಈಗಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಚ್. ಜಿ, ಚೌಡರೆಡ್ಡಿ , ಮಾಜಿ ಅಧ್ಯಕ್ಷರಾದ ಶಾಂತಮ್ಮ, ಮಾಜಿ ಉಪಾಧ್ಯಕ್ಷರಾದ ಗೇರುಪುರ ರಾಮಯ್ಯ, ಮಾಜಿ ಸದಸ್ಯರಾದ ಕೆ.ಮುನಿಶಾಮಪ್ಪ, ರಾಧಮ್ಮ ತಿಮ್ಮರಾಯಪ್ಪ, ನಾಗವೇಣಮ್ಮ ನಾರಾಯಣಸ್ವಾಮಿ, ಕಂಟ್ರಾಕ್ಟರ್ ಶಶಿಕುಮಾರ್ ಗೇರುಪುರ, ಎ.ಮಂಜುನಾಥ್, ಭಾರತಿ ರಮೇಶ್, ಚನ್ನಮ್ಮ ರಾಜಪ್ಪ, ಟಿ.ಎಂ ವೆಂಕಟರಮಣಪ್ಪ, ಬಿ.ವಿ.ಚಂದ್ರಪ್ಪ, ರತ್ನಮ್ಮ ಚೌಡಪ್ಪ, ಸಿ.ಭಾಗ್ಯ ಹರೀಶ್, ಚನ್ನಮ್ಮ ಮುನಿರಾಜ,ಎಚ್. ಎನ್, ಕೃಷ್ಣಪ್ಪ, ಡಿ.ಅಂಜಿನಪ್ಪ, ಎಂ.ವೆಂಕಟೇಶಪ್ಪ, ಡಿ.ಭಾರತಿ ಸೋಮಶೇಖರಯ್ಯ, ಬಿಲ್ ಕಲೆಕ್ಟರ್ ಎಂ. ನಾಗರಾಜ, ಕ್ಲರ್ಕ್/ಕಂಪ್ಯೂಟರ್ ಆಪರೇಟರ್ ಟಿ. ಕೆ. ಮುನಿರಾಜ ಹಾಗೂ ಮೊದಲಾದವರು ಉಪಸ್ಥಿತರಿದ್ದರು.