“ಐರಾವತ” ಯೋಜನೆಯಡಿಯಲ್ಲಿ 4500 ವಾಹನಗಳ ವಿತರಣೆ

1
77

ಬೆಂಗಳೂರು: ಕಲಬುರಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ/ ಯುವತಿಯರಿಗಾಗಿ ಉದ್ಯಮಶೀಲತೆ ಯೋಜನೆಯಡಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ, ಕರ್ನಾಟಕ ಭೋವಿ ಅಭಿವೃದ್ದಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ಆದಿಜಾಂಬವ ಅಭಿವೃದ್ದಿ‌ ನಿಗಮಗಳ ಮೂಲಕ, ರೂ 200 ಕೋಟಿ ವೆಚ್ಚದಲ್ಲಿ 4500 ವಾಹನಗಳನ್ನು ಒದಗಿಸಲು “ಐರಾವತ” ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಈ ಯೋಜನೆಯಡಿಯಲ್ಲಿ ಸೌಲಭ್ಯ ಬಯಸಿ ಆಯ್ಕೆಯಾಗುವ ಪಜಾ ಹಾಗೂ ಪಪಂದ ಅಭ್ಯರ್ಥಿಗಳಿಗೆ ವಾಹನದ ಒಟ್ಟು ವೆಚ್ಚದಲ್ಲಿ ರೂ 5 ಲಕ್ಷಗಳನ್ನು ನಿಗಮಗಳ ವತಿಯಿಂದ ಸಹಾಯಧನವನ್ನಾಗಿ ಕೊಡಲಾಗುತ್ತದೆ.

Contact Your\'s Advertisement; 9902492681

ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ‘ಐರಾವತ’ ಯೋಜನೆಯಡಿ ಮುಖ್ಯಮಂತ್ರಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಇಂದು ಮೇ 30 (ಗುರುವಾರ) ನಡೆದ ಕಾರ್ಯಕ್ರಮದಲ್ಲಿ 209 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಿದರು.

ಐರಾವತ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ.ವೆಚ್ಚದಲ್ಲಿ 4500 ಮಂದಿಗೆ ವಾಹನಗಳನ್ನು ಓಲಾ/ಊಬರ್ ಸಂಸ್ಥೆಗಳ ಸಹಯೋಗದೊಂದಿಗೆ ನೀಡಲಾಗುತ್ತಿದೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here