ಕಲಬುರಗಿ: ನಗರದ ಝುಬೇರ ಕಾಲೋನಿಯಲ್ಲಿ ಬೀದಿನಾಯಿಗಳ ಹಾವಳಿಯಿಂದ ಮೂವರು ಮಕ್ಕಳಿಗೆ ಗಂಭೀರ ಗಾಯ ಗೊಂಡಿರುವ ಘಟನೆ ಸಂಭವಿಸಿದೆ.
ಮಹ್ಮದ್ ಫೈಸಲ್ (4), ಮಹ್ಮದ್ ಝಾಹಿದ್ (5) ಹಾಗೂ ಸಮಿರಾ (4) ಬಿದಿನಾಯಿಗಳ ಹಾವಳಿಗೆ ತುತಾದ ಮಕ್ಕಳು. ಮಕ್ಕಳೆಲ್ಲರು ಕಲಬುರಗಿ ನಗರದ ವಾರ್ಡ್ 2ರ ಝುಬೇರ ಕಾಲೋನಿಯಾ ನಿವಾಸಿಗಳಾಗಿದ್ದು, ಬೀದಿನಾಯಿಗಳು ಹಾವಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳಿಗೆ ಪೋಷಕರು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಬಡಾವಣೆಯಲ್ಲಿ ಮಕ್ಕಳೇಲ್ಲರು ಆಟಾ ಆಡುತಿದ್ದಾಗ, ಬಡಾವಣೆಯಲ್ಲಿರುವ ಬೀದಿನಾಯಿ ಮಕ್ಕಳ ಮೇಲೆ ದಾಳಿ ನಡೆಸಿದವು, ಈ ಸಂದರ್ಭದಲ್ಲಿ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ನಾಯಿಗಳನ್ನು ಹೊಡೆದೊಡಿಸಿ ಮಕ್ಕಳ ಜೀವ ರಕ್ಷಿಸಿದ್ದಾರೆ ಎಂದು ಪ್ರತ್ಯೇಕ್ಷ ದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮಕ್ಕಳ ಮೈ ಮೇಲೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಗೊಂಡ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೋಷಕರು ತಿಳಸಿದ್ದಾರೆ.
ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಮಕ್ಕಳ ಜೀವ ಅಪಾಯಕ್ಕೆ ಸಿಲುಕಿದೆ ಎಂದು ಆರೋಪಿಸಿ ಕಲಬುರಗಿ ಮಹಾನಗರ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಬೀದಿನಾಯಿಗಳನ್ನು ಹಿಡಿದು ರಕ್ಷಣೆಗೆ ಪಾಲಿಕೆ ಮುಂದಾಗಬೇಕು ಮತ್ತು ಗಾಯಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಪಾಲಿಕೆ ಮುಂದಾಗಬೇಕೆಂದು ಸಾರ್ವಜನಿಕರು ಹಾಗೂ ಪೋಷಕರು ಆಗ್ರಹಸಿದರು.