ಸುರಪುರ ತಾಲ್ಲುಕು ಪಂಚಾಯತಿ ಎರಡು ಸ್ಥಾನಗಳು ಬಿಜೆಪಿ ಗೆಲುವು

0
42

ಸುರಪುರ: ವಿವಿಧ ಕಾರಣಗಳಿಂದ ಖಾಲಿಯಾಗಿದ್ದ ತಾಲ್ಲೂಕು ಪಂಚಾಯತಿಯ ಗೆದ್ದಲಮರಿ ಮತ್ತು ಹೆಬ್ಬಾಳ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯಾರ್ಥಿಗಳು ಗೆಲುವು ಕಂಡಿದ್ದಾರೆ.

ಕಳೆದ ೨೯ನೇ ತಾರೀಖಿನಂದು ನಡೆದ ಉಪ ಚುನಾವಣೆಗಳಲ್ಲಿ ಗೆದ್ದಲಮರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಾರ್ಥಿಯಾಗಿ ದುರ್ಗಪ್ಪ ಹಾಗು ಕಾಂಗ್ರೇಸ್ ಪಕ್ಷದ ಅಭ್ಯಾರ್ಥಿಯಾಗಿ ಬಸನಗೌಡ ನರಸಪ್ಪಗೌಡ ಸ್ಪರ್ಧಿಸಿದ್ದರು.ಅದೇರೀತಿಯಾಗಿ ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಾರ್ಥಿಯಾಗಿ ರವಿಕುಮಾರ,ಕಾಂಗ್ರೇಸ್ ಅಭ್ಯಾರ್ಥಿಯಾಗಿ ಉಮಾಬಾಯಿ ತಿರುಪತಿ ಹಾಗು ಬಹುಜನ ಸಮಾಜ ಪಾರ್ಟಿಯಿಂದ ಮೂರ್ತೆಪ್ಪ ಹಣಮಪ್ಪ ಹೊಸಮನಿ ಸ್ಪರ್ಧಿಸಿದ್ದರು.

Contact Your\'s Advertisement; 9902492681

ಶುಕ್ರವಾರ ನಗರದ ತಹಸೀಲ್ ಕಚೇರಿಯಲ್ಲಿ ಮತ ಎಣಿಕೆ ನಡೆಸಲಾಯಿತು.ಗೆದ್ದಲಮರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಾರ್ಥಿ ದುರ್ಗಪ್ಪ ಸಗರೆಪ್ಪ ೩೨೬೦ ಮತಗಳು ಬಂದರೆ,ಕಾಂಗ್ರೇಸ್ ಪಕ್ಷದ ಬಸನಗೌಡ ೨೩೦೨ ಮತಗಳನ್ನು ಪಡೆದರು.ಈ ಕ್ಷೇತ್ರದಲ್ಲಿ ಬಿಜೆಪಿ ಅಬ್ಯಾರ್ಥಿ ೯೫೮ ಮತಗಳಿಂದ ಜಯಶಾಲಿಯಾದರು.ಇಲ್ಲಿ ೧೩೪ ಮತಗಳು ನೋಟಾಗೆ ಬಂದಿದ್ದು ವಿಶೇಷ ಎನ್ನಬಹುದಾಗಿದೆ.

ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಾರ್ಥಿ ರವಿಕುಮಾರ ೨೩೩೨ ಮತಗಳನ್ನು ಪಡೆದರೆ,ಕಾಂಗ್ರೇಸ್ ಅಭ್ಯಾರ್ಥಿ ಉಮಾಬಾಯಿಗೆ ೧೪೭೧ ಮತಗಳು ಬಂದು ಬಿಜೆಪಿ ಅಬ್ಯಾರ್ಥಿ ವಿರುಧ್ದ ೮೬೧ ಮತಗಳಿಂದ ಸೋಲು ಅನುಭವಿಸಿದಳು.ಇಲ್ಲಿ ಬಹುಜನ ಸಮಾಜ ಪಾರ್ಟಿಯ ಅಭ್ಯಾರ್ಥಿ ಮೂರ್ತೆಪ್ಪ ಹೊಸಮನಿ ೧೪೮ ಮತಗಳನ್ನು ಪಡೆದು ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟರೆ ೫೪ ಮತಗಳು ನೋಟಾಗೆ ಬಂದಿವೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯಾರ್ಥಿಗಳ ಗೆಲುವಿನಿಂದ ಬಿಜೆಪಿ ಕಾರ್ಯಕರ್ತರು ಗುಲಾಲು ಎರಚಿ,ಸಿಹಿ ಹಂಚಿ ಕೇಕೆ ಹಾಕಿ ಸಂಭ್ರಮಿಸಿದರು.ಶಾಸಕ ನರಸಿಂಹ ನಾಯಕ(ರಾಜುಗೌಡ)ರ ಮನೆಯಲ್ಲಿ ಸೇರಿದ ಕಾರ್ಯಕರ್ತರು ಗೆಲುವಿನ ಸಂಭ್ರಮಾಚರಿಸಿದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ,ವೀರುಪಾಕ್ಷಿ ಕೋನಾಳ,ಮಲ್ಲಿಕಾರ್ಜುನ ರೆಡ್ಡಿ,ಮಹೇಶ ರಾವೂರ್ ಸೇರಿದಂತೆ ಅನೇಕ ಮುಖಂಡರಿದ್ದರು.

ಕಾಮನಟಿಗಿ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ರಾಜಮ್ಮಾ ರಾಜಸಾಬ್ ಹಾಗು ಶಿಲ್ಪಾ ಸಾಬಣ್ಣ ಮದ್ಯೆ ಚುನಾವಣೆ ನಡೆದಿತ್ತು.ಈ ಚುನಾವಣೆಯ ಮತ ಎಣಿಕೆಯೂ ನಡೆದಿದ್ದು,ಕಾಂಗ್ರೇಸ್ ಬೆಂಬಲಿತ ಅಭ್ಯಾರ್ಥಿ ಶಿಲ್ಪಾ ಸಾಬಣ್ಣ ೬೬೦ ಮತಗಳನ್ನು ಪಡೆದರೆ,ಬಿಜೆಪಿ ಬೆಂಬಲಿತ ಅಭ್ಯಾರ್ಥಿ ರಾಜಮ್ಮಾಗೆ ಕೇವಲ ೨೮೮ ಮತಗಳು ಬಂದು ೩೭೨ ಮತಗಳಿಂದ ಸೋಲು ಕಂಡಿದ್ದರಿಂದ,ಕಾಂಗ್ರೇಸ್ ಗ್ರಾಮ ಪಂಚಾಯತಿ ಸ್ಥಾನದ ಗೆಲುವಿನಿಂದ ತೃಪ್ತಿ ಪಟ್ಟಂತಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here