ಬೈರಿಮರಡಿ ಗ್ರಾಮದಲ್ಲಿ ಜಯಕರ್ನಾಟಕದಿಂದ ಸಾಮೂಹಿಕ ವಿವಾಹಗಳು

0
35

ಸುರಪುರ: ಜಯಕರ್ನಾಟಕ ಸಂಘಟನೆಯ ಸುರಪುರ ತಾಲ್ಲೂಕು ಘಟಕದಿಂದ ತಾಲ್ಲೂಕಿನ ಬೈರಿಮರಡಿ ಗ್ರಾಮದಲ್ಲಿ ಸಾಮೂಹಿಕ ವಿವಾಹಗಳು ಜರುಗಿದವು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ದೇವಾಪುರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಇಂದಿನ ಬರಗಾಲದ ಪರಸ್ಥಿತಿಯಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕಿದೆ.ಇದರಿಂದ ಬಡ ಮದ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ಕಮ್ಮಿಯಾಗಲಿದೆ.ಅಲ್ಲದೆ ಸಾಮೂಹಿಕ ವಿವಾಹಗಳಿಂದ ಪರಸ್ಪರ ಸಮುದಾಯಗಳ ಮದ್ಯೆ ಸಾಮರಸ್ಯ ಮೂಡಲಿದೆ.ಇಂದು ಹಸೆ ಮಣೆ ಎಲ್ಲ ದಂಪತಿಗಳಿಗೆ ಶುಭವಾಗಲೆಂದು ಆಶೀರ್ವದಿಸಿದರು.ಇದೇ ಸಂದರ್ಭದಲ್ಲಿ ಲಕ್ಷ್ಮೀಪುರ ಶ್ರೀಗಿರಿ ವಠದ ಬಸವಲಿಂಗ ದೇವರು ಹಾಗು ಶಹಾಪುರ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಮಾತನಾಡಿದರು.

ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ ಮಾತನಾಡಿ,ಜಯಕರ್ನಾಟಕ ಸಂಘಟನೆಯು ಕೇವಲ ಹೋರಾಟಗಳಿಗೆ ಮಾತ್ರ ಸೀಮಿತವಾಗದೆ,ಹೋರಾಟದ ಜೊತೆಗೆ ಸಮಾಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರು,ಶಾಲೆಗಳ ದತ್ತು ಸೇರಿದಂತೆ ಈಗ ಸಾಮೂಹಿಕ ವಿವಾಹಗಳನ್ನು ನಡೆಸುವ ಮೂಲಕ ಸಮಾಜದ ಅಭಿವೃಧ್ಧಿಗೆ ಶ್ರಮಿಸುತ್ತಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ನವ ಜೀವನಕ್ಕೆ ಕಾಲಿಟ್ಟ ಅನೇಕ ಜೋಡಿಗಳಿಗೆ ಸ್ವಾಮೀಜಿಗಳು ವಿವಾಹ ಗೌಪ್ಯತೆ ಬೋಧಿಸಿದರು.ಅಡಿವಿಲಿಂಗ ಮಹಾರಾಜ ಸ್ವಾಮೀಜಿ ವೀರಗೋಟ,ರಾಮಲಿಂಗ ಶರಣರು ಆನಂದಾಶ್ರಮ ಮಂಟೂರ ಶಾಖಾ ಮಠ ಪೇಠ ಅಮ್ಮಾಪುರ,ಪ್ರಭುಲಿಂಗ ಮಹಾಸ್ವಾಮೀಜಿ ಕಡ್ಲೆಪ್ಪನವರ ಮಠ ಸುರಪುರ,ಮಾರ್ಥಂಡಪ್ಪ ಮುತ್ಯಾ ದೇವರಗೋನಾಲ ಹಾಗು ಜಯಕರ್ನಾಟಕ ಸಂಘಟನೆಯ ಮುಖಂಡರಾದ ಅಪ್ಪಣ್ಣ ಓಲೆಕಾರ್, ರಾಮಚಂದ್ರಯ್ಯ ಮತ್ತು ಬಿಜೆಪಿ ಮುಖಂಡ ಶರಣು ನಾಯಕ ಬೈರಿಮರಡಿ, ಹೋರಾಟಗಾರ ವೆಂಕಟೇಶ ನಾಯಕ ಬೈರಿಮರಡಿ,ಮಂಜುನಾಥ ನಾಯಕ ಬೈರಿಮರಡಿ,ಜಿಲ್ಲಾಧ್ಯಕ್ಷ ವಿಶ್ವನಾಥ ನಾಯಕ, ಹೆಚ್.ಕೆ.ಕುರಕುಂದ, ರಾಜು ದರಬಾರಿ,ಹಣಮಂತರಾಯ ಮೇಟಿಗೌಡ, ಮಲ್ಲಿಕಾರ್ಜುನ ಜಾಲಿಬೆಂಚಿ,ಶರಣಪ್ಪ ಬೈರಿಮರಡಿಸ ಸೇರಿದಂತೆ ಅನೇಕರಿದ್ದರು.ಕಾರ್ಯಕ್ರಮದ ನೇತೃತ್ವವನ್ನು ಸಂಘಟನೆಯ ತಾಲ್ಲೂಕು ಅಧ್ಯಕ್ಷ ರವಿಕುಮಾರ ನಾಯಕ ವಹಿಸಿದ್ದರು.ಮಂಜುಳಾ ಮೆಲೊಡೀಸ್ ಬಾಗಲಕೋಟೆಯವರಿಂದ ರಸಮಂಜರಿ ಕಾರ್ಯಕ್ರಮ ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here