ಸುರಪುರ: ಇಂದು ದೇಶದಲ್ಲಿನ ಎಲ್ಲರು ನಮ್ಮ ಸಂಸ್ಕೃತಿ ಪರಂಪರೆಯ ಉಳಿವಿಗಾಗಿ ಹೋರಾಟ ಮಾಡಲು ಮುಂದಾಗುವ ಅವಶ್ಯವಿದೆ ಎಂದು ರಾಮ್ ಸೇನಾ ಸಂಘಟನೆಯ ಸುರಪುರ ತಾಲೂಕು ಅಧ್ಯಕ್ಷ ಶರಣು ನಾಯಕ ಡೊಣ್ಣಿಗೇರಾ ಮಾತನಾಡಿದರು.
ಹುಣಸಗಿ ತಾಲೂಕಿನ ಸೊನ್ನಾಪುರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ರಾಮ್ ಸೇನಾ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿ,ಭಾರತದಲ್ಲಿ ಹಿಂದುವೆ ಸಾರ್ವಭೌಮ ನಮ್ಮ ಧರ್ಮದ ಉಳಿವು ಮತ್ತು ಧರ್ಮ ಪಾಲನೆಗಾಗಿ ಎಲ್ಲರು ಹೋರಾಟ ಮಾಡುವ ಅನಿವಾರ್ಯತೆ ಎದುರಾಗುತ್ತಿದೆ.ಇದನ್ನು ಅರಿತುಕೊಂಡು ಇಂದು ಸೊನ್ನಾಪುರ ತಾಂಡಾದ ಎಲ್ಲಾ ದೇಶಪ್ರೇಮಿಗಳು ರಾಮ್ ಸೇನಾದೊಂದಿಗೆ ಸೇರಿ ಹೋರಾಟಕ್ಕೆ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ನಂತರೆ ಜ್ಯೋತಿ ಬೆಳಗುವ ಮೂಲಕ ಶಾಖೆಯನ್ನು ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಪದಾಧಿಕಾರಿಗಳಾದ ಶರಣು ನಾಯಕ ದೀವಳಗುಡ್ಡ ಹಯ್ಯಾಳಪ್ಪ ಹಾದಿಮನಿ ಲೋಕೇಶ್ ನಾಯಕ ಡೊಣ್ಣಿಗೇರಾ ಅಂಬ್ರೇಶ ನಾಯ್ಕೊಡಿ ವೇದಿಕೆ ಮೇಲಿದ್ದರು.
ಗ್ರಾಮ ಶಾಖೆ ಪದಾಧಿಕಾರಿಗಳು: ಪರಶುರಾಮ ಚವ್ಹಾಣ (ಗೌರವಾಧ್ಯಕ್ಷ) ಬಸವರಾಜ ಚವ್ಹಾಣ (ಅಧ್ಯಕ್ಷ) ರಾಘವೇಂದ್ರ,ಶಿವರಾಯ ಚವ್ಹಾಣ (ಉಪಾಧ್ಯಕ್ಷರು) ಕೃಷ್ಣಾನಾಯಕ್(ಪ್ರಧಾನ ಕಾರ್ಯದರ್ಶಿ) ಹಾಗು ಮೌನೇಶ್,ಮಹಾದೇವ ಅನಿಲಕುಮಾ ಕಿರಣ್ ಅಶೋಕ ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಲಾಯಿತು.