ಸುರಪುರ: ಬಸವಾದಿ ಶರಣರ ಸಮಕಾಲಿನ ಶರಣ ಎಂದು ಹೇಳಲಾಗುವ ಶರಣ ಹಾವಿನಾಳದ ಕಲ್ಲಯ್ಯನವರ ದೇವಸ್ಥಾನ ಸ್ವಚ್ಛತಾ ಕಾರ್ಯವನ್ನು ಯುವ ಬ್ರಿಗೇಡ್ ವತಿಯಿಂದ ನಡೆಸಲಾಯಿತು.ಯುವ ಬ್ರಿಗೇಡ್ ಮುಖಂಡ ಬಸವರಾಜ ಮೇಲಿನಮನಿ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ವಚ್ಛತಾ ಕಾರ್ಯ ನಡೆಸಿ ಇಡೀ ದೇವಸ್ಥಾನದ ಆವರಣ ಹಾಗು ಸುತ್ತಲ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಬಸವರಾಜ ಮೇಲಿನಮನಿ ಹುಣಸಗಿ ಮಾತನಾಡಿ,ಶರಣ ಹಾವಿನಾಳದ ಕಲ್ಲಯ್ಯನವರ ಐತಿಹಾಸಿಕವಾದ ದೇವಸ್ಥಾನವನ್ನು ಸರಕಾರ ನಿರ್ಲಕ್ಷ್ಯ ತೋರಿದೆ.ಪುರಾತತ್ವ ಇಲಾಕೆಯವರು ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸುವ ಮೂಲಕ ಇತಿಹಾಸವನ್ನು ಸಂರಕ್ಷಿಸುವ ಕೆಲಸ ಮಾಡಬೇಕಿತ್ತು.ಆದರೆ ಸರಕಾರದ ನಿರ್ಲಕ್ಷ್ಯ ಬೇಸರ ಮೂಡಿಸಿದೆ.ಆದ್ದರಿಂದ ಇಂದು ದೇವಸ್ಥಾನವನ್ನು ಸ್ವಚ್ಛಗೊಳಿಸುವ ಮೂಲಕ ಯುವ ಬ್ರಿಗೇಡ್ ಸರಕಾರದ ಗಮನ ಸೆಳೆಯಲಿದೆ ಎಂದರು.
ಅಲ್ಲದೆ ಸರಕಾರ ಕೂಡಲೆ ಪುರಾತತ್ವ ಇಲಾಖೆಯ ಮೂಲಕ ದೇವಸ್ಥಾನ ಜೀರ್ಣೋಧ್ಧಾರಗೊಳಿಸಿ ಸಂರಕ್ಷಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಯುವ ಬ್ರಿಗೇಡ್‌ನ ಸಂತೋಷ ಪಾಟೀಲ ಹೆಬ್ಬಾಳ ದಿವಾನ ಮಂಜು ಸಂತು ಪಾಟೀಲ್ ರಮೇಶ ಮಿರಾಜಕರ್ ಸಾಗರ್ ನಿಂಬಾಳ ನಿಂಗೂ ಪಾಟೀಲ್ ವಿಶ್ವ ಬಿರಾದಾರ್ ರವಿ ದಾಸರ ವಿಶ್ವನಾಥ ಯಾದವ್ ಅಂಬರೀಶ ರಾಯಗೇರಿ ಪರಮಣ್ಣ ಶೆಟ್ಟಿ ಇದ್ದರು.