ಎಂ. ಎಸ್. ಇರಾಣಿ ಪದವಿ ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ

0
69

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರೀಡಾ ಪಟುಗಳಿಗೆ ಸ್ಪೂರ್ತಿ ನೀಡಲೆಂದು ಈ ಬಾಗದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯವರು ಯು.ಜಿ.ಸಿ. ಅನುದಾನದಲ್ಲಿ ನಿರ್ಮಾಣ ಮಾಡಿರುವ ಒಳಾಂಗಣ ಕ್ರೀಡಾಂಗಣವೆ ಸಾಕ್ಷೀ ಎಂದು ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ರವರು ನುಡಿದರು.

ನಗರದ ಪ್ರತಿಷ್ಠಿತ ಎಂ. ಎಸ್. ಇರಾಣಿ ಪದವಿ ಕಾಲೇಜಿನಲ್ಲಿ ನಿರ್ಮಾಣವಾದ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡುತ್ತಾ ಈ ರೀತಿಯ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಈ ಭಾಗದ ಅದರಲ್ಲೂ ನಗರದ ಮಹಾವಿದ್ಯಾಲಯದಲ್ಲಿ ನಿರ್ಮಾಣವಾಗಿರುವುದು ಈ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ನುಡಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ನಗರದಲ್ಲಿ ಸುಮಾರು ೫೦ ಎಕರೆ ಪ್ರದೇಶದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರಣವನ್ನು ನಿರ್ಮಾಣ ಮಾಡುವುದಾಗಿ ರೇವೂರ ಹೇಳಿದ್ದರು.

Contact Your\'s Advertisement; 9902492681

ಬಡ ಮಕ್ಕಳ ಭವಿಷ್ಯ ನಿರ್ಮಾಣ ಮಾಡಲೆಂದೆ ಹುಟ್ಟಿಕೊಂಡಿರುವ ಶಿಕ್ಷಣ ಸಂಸ್ಥೆ ಎಂದರೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಸಿ. ಬಿಲಗುಂದಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ. ಶಿವಾನಂದ ದೇವರಮನಿ, ಕಾರ್ಯದರ್ಶಿ ನಿತಿನ ಬಿ. ಜವಳಿಯವರು, ಜಂಟಿ ಕಾರ್ಯದಶಿ ಗಂಗಾಧರ ಎಲಿಯವರು, ಸಂಯೋಜಕರಾದ  ವಿಜಯಕುಮಾರ ದೇಶಮುಖಯವರು, ಆಡಳಿತ ಮಂಡಳಿ ಸದಸ್ಯರಾದ ಡಾ. ಸಂಪತಕುಮಾರ ಲೋಯಾ,  ಉದಯಕುಮಾರ ಚಿಂಚೋಳಿ,  ಸತೀಶಚಂದ್ರ ಹಡಗಲಿಮಠ,  ಸಂಜಯ ಮಾಕಲ್, ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಎ. ಪಾಟೀಲ ರವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದ್ದರು.  ಶಿವಲೀಲಾ ಧೋತ್ರೆಯವರು ನಿರ್ವಹಿಸಿದ್ದರು. ಡಾ. ರಾಜಶೇಖರ ಬೀರನಳ್ಳಿಯವರು ವಂದಿಸಿದ್ದರು.  ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಪ್ರೇಮಚಂದ ಚವ್ಹಾಣ, ಡಾ. ಪ್ರಾಣೇಶ ಎಸ್.  ಶಂಕ್ರಪ್ಪ ಕಲಬುರಗಿ.  ರೋಹಿಣಿಕುಮಾರ ಹಿಳ್ಳಿ, ಅನೇಕ ಬೋಧಕ-ಬೋಧಕೇತ್ತರ ಸಿಬ್ಬಂಧಿವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here