ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಪರಿಹಾರ ನೀಡಿ: ರಾಜು ಕುಂಬಾರ

0
56

ಸುರಪುರ: ಇಂದು ರಾಜ್ಯದಲ್ಲಿ ಅನೇಕ ಜನ ವಿವಿಧ ಮಾದ್ಯಮಗಳ ವರದಿಗಾರರು ಕೊರೊನಾ ವರದಿಗಾಗಿ ತೆರಳಿದ ಸಂದರ್ಭದಲ್ಲಿ ಸೊಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಅಂತಹ ಎಲ್ಲಾ ಮಾದ್ಯಮಗಳ ಪ್ರತಿನಿಧಿಗಳಿಗೆ ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಪರಿಹಾರ ನೀಡುವಂತೆ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಂiiನ್ ತಾಲೂಕು ಅಧ್ಯಕ್ಷ ರಾಜು ಕುಂಬಾರ ಸರಕಾರಕ್ಕೆ ಆಗ್ರಹಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಸರಕಾರ ಅಂಗನವಾಡಿ ಆರೋಗ್ಯ ಸ್ವಚ್ಛತಾ ಕರ್ಮಿಗಳು ಹಾಗು ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಪರಿಹಾರ ಧನವನ್ನು ಘೋಷಣೆ ಮಾಡಿದೆ.ಆದರೆ ಪತ್ರಕರ್ತರು ಹಗಲಿರಳು ಜೀವದ ಹಂಗು ತೊರೆದು ಕೊರೊನಾ ಸೊಂಕಿತರ ಕುರಿತು ಹಾಗು ಜನ ಜಾಗೃತಿಗಾಗಿ ಕೆಲಸ ಮಾಡುತ್ತಾರೆ.

Contact Your\'s Advertisement; 9902492681

ಅಂತಹ ಮಾದ್ಯಮದ ವರದಿಗಾರರನ್ನೂ ಸರಕಾರ ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಬೇಕಿರುವುದು ಸರಕಾರದ ಕರ್ತವ್ಯವಾಗಿದೆ.ಆದ್ದರಿಂದ ಸರಕಾರ ಮಾದ್ಯಮದ ಪ್ರತಿನಿಧಿಗಳಿಗೂ ವಾರಿಯರ್ಸ್‌ಗೆ ನೀಡುವಂತೆ ಪರಿಹಾರ ಧನ ನೀಡಬೇಕು.ಕಳೆದ ಎರಡು ದಶಕಗಳಿಂದ ವಿವಿಧ ಪತ್ರಿಕೆಗಳಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ ಸೋಮಶೇಖರ ನರಬೋಳಿ ಎಂಬುವ ವರದಿಗಾರರು ಕಳೆದ ಕೆಲ ದಿನಗಳ ಹಿಂದೆ ಎದೆ ನೋವಿನಿಂದ ನಿಧನರಾಗಿದ್ದು,ಕಲಬುರ್ಗಿ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಅವರನ್ನು ಕೋವಿಡ್-೧೯ ನಿಯಮದಂತೆ ಶವ ಸಂಸ್ಕಾರ ಮಾಡಿದ್ದಾರೆ.

ಮೃತ ವರಿದಗಾರ ಸೋಮಶೇಖರ ನರಬೋಳಿಯವರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಸರಕಾರ ಪರಿಹಾರ ಧನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಕೆಜೆಯು ಒತ್ತಾಯಿಸುತ್ತದೆ ಜೊತೆಗೆ ಸ್ಥಳಿಯ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರು ಕೂಡ ಸರಕಾರದ ಮೇಲೆ ಒತ್ತಡ ಹಾಕಿ ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಜೆಯು ಉಪಾಧ್ಯಕ್ಷ ಮಲ್ಲು ಗುಳಗಿ,ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ,ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಮುರಳಿಧರ ಅಂಬುರೆ ಕಲೀಂ ಫರೀದಿ ಪುರೊಷೋತ್ತಮ ದೇವತ್ಕಲ್ ರಾಘವೇಂದ್ರ ಮಾಸ್ತರ್ ಮಾಳಪ್ಪ ಕಿರದಳ್ಳಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here