ಮಹಾತ್ಮ ಗಾಂಧಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಪುನರುಜ್ಜೀವನಕ್ಕೆ ಮನವಿ

0
25

ಸುರಪುರ: ನಗರದ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ವೃತ್ತದ ಆವರಣ ಹಾಗು ಹಳೆ ಬಸ್ ನಿಲ್ದಾಣ ಬಳಿಯ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಆವರಣ ಪುನರುಜ್ಜೀವನಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕ್ವಾರಿ ಕಾರ್ಮಿಕರ ಸಂಘದ ಮುಖಂಡರು ನಗರಸಭೆಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ,ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿ ಸ್ವಾತಂತ್ರ್ಯ ದೊರಕಿಸಿದ್ದರಿಂದ ಮಹಾತ್ಮ ಗಾಂಧಿ ಎಂದು ದೇಶದ ಜನರು ಕರೆಯುವ ಒಬ್ಬ ಸ್ವಾತಂತ್ರ್ಯ ಹೋರಾಟಗಾರನ ಮೂರ್ತಿ ಆವರಣ ಸಂಪೂರ್ಣ ಶಿಥಿಲಾವಸ್ಥಗೆ ತಲುಪಿದೆ.ಆದರೆ ನಗರಸಭೆ ನಿರ್ಲಕ್ಷ್ಯ ತೋರುವ ಮೂಲಕ ಅವಮಾನಿಸಲಾಗುತ್ತಿದೆ,ಅಲ್ಲದೆ ದೇಶಕ್ಕೆ ರಾಮಾಯಣ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿ ಆವರಣವು ಶಿಥಿಲಗೊಂಡಿದೆ ಆದರೆ ನಗರಸಭೆ ಮೂರ್ತಿ ಆವರಣದ ದುರಸ್ಥಿಗೆ ಮುಂದಾಗದಿರುವುದು ದುರದೃಷ್ಟದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಂತರ ಮಾಜಿ ನಗರಸಭೆ ಸದಸ್ಯ ಅಹ್ಮದ್ ಪಠಾಣ್ ಮಾತನಾಡಿ, ಮಹಾತ್ಮ ಗಾಂಧಿ ಮೂರ್ತಿ ಆವರಣ ದುರಸ್ಥಿಗೆ ಅನೇಕ ಬಾರಿ ಮನವಿ ಮಾಡಿದರು ಪ್ರಯೋಜನೆಯಾಗುತ್ತಿಲ್ಲ,ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ.ನಗರಸಭೆ ಕೂಡಲೆ ಮಹಾತ್ಮ ಗಾಂಧಿ ವೃತ್ತ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಪುನರುಜ್ಜೀವನಗೊಳಿಸಬೇಕು ಇಲ್ಲವಾದಲ್ಲಿ ಮುಂಬರು ಅಕ್ಟೋಬರ್ ೨ ರಂದು ಮಹಾತ್ಮ ಗಾಂಧಿ ಮೂರ್ತಿಗೆ ನಗರಸಭೆ ಮಾಲಾರ್ಪಣೆ ಮಾಡಲು ಬಿಡುವುದಿಲ್ಲವೆಂದು ಎಚ್ಚರಿಸಿದರು.

ನಂತರ ನಗರಸಭೆ ಪೌರಾಯುಕ್ತರಿಗೆ ಬರೆದ ಮನವಿಯನ್ನು ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಓಂಕಾರೆಪ್ಪ ಪೂಜಾರಿ ಹಾಗು ಸಂಘಟನೆ ಮುಖಂಡರಾದ ಆನಂದ ಕಟ್ಟಿಮನಿ ದೇವಿಂದ್ರಪ್ಪ ನಗರಗುಂಡ ಅಬ್ದುಲ್ ರೌಫ್ ತಿಮ್ಮಯ್ಯ ತಳವಾರ ಮಲ್ಲಯ್ಯ ವಗ್ಗಾ ತಿಮ್ಮಣ್ಣ ದೊರಿ ಪರಶುರಾಮ ಹುಲಕಲ್ ಅಬೀದ್ ಹುಸೇನ್ ಪಗಡಿ ಬಂದೇನವಾಜ್ ಮದನ ಶಾ ಮಹಾದೇವಪ್ಪ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here