ಬೆಂಗಳೂರ: ಪ್ರಿಯಾಂಕ್ ಖರ್ಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದುˌ ಸ್ವತಹ ತಮ್ಮ ತಂದೆಯ ಸೋತ ದು:ಖದಲ್ಲಿದ್ದರೂ ಗಂಗಾಮತ ಸಮಾಜವನ್ನು ಖುಷಿಯಲ್ಲಿಡುವ ಉದ್ದೇಶದಿಂದ ನನ್ನನ್ನು ಎಂಎಲ್ಸಿ ಮಾಡಿದ್ದಾರೆ. ಇಂತಹ ಛಲಗಾರ ಜಗತ್ತಿನಲ್ಲಿಯೇ ಯಾರೂ ಇಲ್ಲ ಅಂತ ನೂತನ ವಿಧಾನಪರಿಷತ್ ಸದಸ್ಶ ತಿಪ್ಪಣಪ್ಪ ಕಮಕನೂರ್ ಅಭಿಪ್ರಾಯಪಟ್ಟರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಷತ್ ನೂತನ ಸದಸ್ಶರ ಸನ್ಮಾನ ಸಭೆಯಲ್ಲಿ ಅವರು ಮಾತನಾಡಿದರು. ನನ್ನನ್ನು ಪರಿಷತ್ ಸದಸ್ಶರಾಗಿ ಮಾಡದಂತೆ ಹಲವರು ಪಿತೂರಿ ನಡೆಸಿದ್ದರು. ಆದರೆ ಸಮಾಜ ಕಲ್ಶಾಣ ಸಚಿವ ಪ್ರಿಯಾಂಕ್ ಖರ್ಗೆ ಚುನಾವಣೆಗೆ ಮುಂಚೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಯಾರ ವಿರೋಧವು ಲೆಕ್ಕಿಸದೆ ಕೂಲಿ ಸಮಾಜಕ್ಕೆ ಇಂತಹ ಅವಕಾಶ ನೀಡಿದ ಗಂಡಸು ಮಗಾ ಜಗತ್ತಿನಲ್ಲಿಲ್ಲ ಎಂದರು.
ಇದೇ ವೇಳೆ ತಮ್ಮ ನೇಮಕಕ್ಕೆ ಕಾರಣರಾದ ಡಾ.ಮಲ್ಲಿಕಾರ್ಜುನ್ ಖರ್ಗೆಯವರ ಸೋಲನ್ನು ನೆನೆದು ಭಾವುಕರಾದರು. ಅಲ್ಲದೆ ಮುಂಬರುವ ದಿನಗಳಲ್ಲಿ ಎಲ್ಲ ಸಮಾಜದ ಕೆಲಸಗಳನ್ನು ಮಾಡುವುದರ ಮೂಲಕ ಸ್ಥಾನದ ಘನತೆಯನ್ನು ಹೆಚ್ಚಿಸುವುದಾಗಿ ಕಮಕನೂರ್ ತಿಳಿಸಿದರು. ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆˌ ಹಲವು ಹೋರಾಟಗಳ ಮೂಲಕ ಗುರುತಿಸಿಕೊಂಡ ತಿಪ್ಪಣಪ್ಪ ಕಮಕನೂರ್ ಇನ್ಮುಂದೆ ಶಾಸನಗಳನ್ನು ರೂಪಿಸಲಿ ಎಂದು ಹಾರೈಸಿದರು.
ಕಲಬುರಗಿಯಲ್ಲಿ ಮತ್ತೆ ಕಾಂಗ್ರೆಸ್ ಹವಾ ಶುರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತು ಎಂದು ಯಾರೂ ಎದೆಗುಂದಬಾರದು. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಎದ್ದು ಬರುವ ತಾಕತ್ತಿದೆ. ತಿಪ್ಪಣಪ್ಪ ಕಮಕನೂರ್ ಅವರಿಗೆ ಪರಿಷತ್ ಗೆ ನೇಮಕ ಮಾಡಿದ್ದುˌ ಕಾರ್ಯಕರ್ತರುˌ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು ಎಂದು ಸಮಾಜ ಕಲ್ಶಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಈ ವೇಳೆ ಹಿಂದುಳಿದ ವರ್ಗದ ಸದಸ್ಶ ಶರಣಪ್ಪ ಮಾನೇಗಾರ್ˌ ಭೀಮಣ್ಣ ಸಾಲಿˌ ಶಿವರಾಜ ಪಾಟೀಲ್ˌ ಸುಭಾಷ್ ರಾಠೋಡˌ ದೇವಿಂದ್ರಪ್ಪ ಮರತೂರ್ˌ ಡಾ.ಅರುಣಕುಮಾರ್ ಕುರ್ನೆˌ ರಮೇಶ ಹೂವಿನಹಳ್ಳಿˌ ಶರಣು ಡೊಂಗರಗಾಂವˌ ರವಿರಾಜ್ ಕೊರವಿ ಸೇರಿದಂತೆ ಅನೇಕರು ಇದ್ದರು.
ಜೈ ಕಾಂಗ್ರೆಸ್ ಪಕ್ಷ
Jai Congress