’ಉನ್ನತ ಶಿಕ್ಷಣ ಸಮಾಜದ ಕಡೆಗೆ’ ಇದು ರಾಷ್ಟ್ರೀಯ ಶಿಕ್ಷಣ ನೀತಿ 2020ಯ ಘೋಷಣೆ.

0
50

ಕಲಬುರಗಿ: ಸಾರ್ವಜನಿಕ ಆಡಳಿತ ವಿಭಾಗ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾನಿಲಯ ಉನ್ನತ ಶಿಕ್ಷಣ ಗುರಿ ಮತ್ತು ಫಥ ಎಂಬ ವಿಷಯದ ಕುರಿತು ವೇಬಿನಾರ್ ಆಯೋಜಿಸಿತ್ತು.

ಕಾರ್ಯಕ್ರಮವನ್ನು ಉಘ್ಘಾಟಿಸಿದ ಕೇಂದ್ರಿಯ ವಿವಿ ಕುಲಪತಿಗಳಾದ ಪ್ರೊ. ಹೆಚ್.ಎಂ. ಮಹೇಶ್ವರಯ್ಯ ಅವರು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ೨೧ನೇ ಶತಮಾನದ ಸವಾಲುಗಳನ್ನು ಎದುರಿಸಲು ದೇಶವನ್ನು ಸನ್ನದ್ಧಗೊಳಿಸುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ, ಕರ್ನಾಟಕ ಕೇಂದ್ರಿಯ ವಿವಿ ಸದರಿ ನೀತಿಯ ಎಲ್ಲಾ ಅಂಶಗಳನ್ನು ಜಾರಿಗೊಳಿಸುವ ಆಶಯ ಮತ್ತು ಪ್ರಯತ್ನವನ್ನು ಈಗಾಗಲೇ ಆರಂಭಿಸಿದೆ ಎಂದರು ’ಉನ್ನತ ಶಿಕ್ಷಣ ಸಮಾಜದ ಕಡೆಗೆ’ ಇದು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ಯ ಕರೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ವೇನಿನಾರಿನ ರೂಪುರೇಷೆಯ ಕುರಿತು ಮಾತನಾಡಿದ ಕುಲಸಚಿವರಾದ ಪ್ರೋ. ಮುಸ್ತಾಕ್ ಆಹಮ್ಮದ್ ಐ ಪಟೇಲ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಸಮಾನದ ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಆಶಯವನ್ನು ಹೊಂದಿದೆ, ಸದರಿ ನೀತಿಯಲ್ಲಿ ಪ್ರಸಾಪಿತವಾಗಿರುವ ಅಂತಶಿಸ್ತೀಯ ಪದವಿಗಳು ನಮ್ಮ ಭಾರತದಂತಹ ವೈದಿದ್ಯಮಯ ದೇಶಕ್ಕೆ ಅಗತ್ಯವಾದ ಅಂಶವಾಗಿದೆ ಎಂದರು, ಎಲ್ಲಾ ಜಿಲ್ಲೆಗಳಲ್ಲಿಯೂ ೨೦೩೦ರ ಒಳಗಾಗಿ ಅಂತರ್ ಶಿಸ್ತೀಯ ಕಾಲೇಜುಗಳ ಸ್ಥಾಪನೆಯ ಗುರಿ ಉನ್ನತ ಶಿಕ್ಷಣಕ್ಕೆ ಹೊಸ ರೂಪವನ್ನು ಕೊಡಲಿದೆ ಎಂದು ಬಣ್ಣಿಸಿದರು, ಸದರಿ ನೀತಿಯಲ್ಲಿನ ಹಲವು ಸಂಗತಿಗಳ ಕುರಿತು ಶಾಸನಸಭೆಗಳಲ್ಲಿ ವ್ಯಾಪಕವಾಗಿ ನಡೆಯಲಿರುವ ಚರ್ಚೆ ಈ ಶಿಕ್ಷಣ ನೀತಿಗೆ ಮಹತ್ವದ ಒಳನೋಟ ಒದಗಿಸಿದಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕರ್ನಾಟಕ ವಿವಿ ಧಾರವಾಡದ ವಿಶ್ರಾಂತ ಕುಲಪತಿ ಪ್ರೊ. ಖಜಾಪೀರ್ ಅವರು ಶಿಕ್ಷಣದ ಬೆಳವಣಿಗೆ ನಮ್ಮ ವಿವಿಗಳ ಮೂಲಸೌಲಭ್ಯಗಳ ಸ್ಥಿತಿಗತಿಯನ್ನು ಆಧರಿಸಿರುತ್ತದೆ ಹಾಗಾಗಿ ಮೂಲಭೂತ ಸೌಕರ್ಯಗಳು, ಶುದ್ಧ ನೀರು, ಶೌಚಾಯಲ ವ್ಯವಸ್ಥೆ ಇತ್ಯಾದಿಗಳು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಭಾವ ಬೀರಲಿದೆ ಸದರಿ ಪಾಲಿಸಿ ಈ ಎಲ್ಲಾ ಸೂಕ್ಷ್ಮ ಸಂಗತಿಗಳನ್ನು ಗುರುತಿಸಿರುವುದು ಮಹತ್ವದ ವಿಷಯ ಎಂದರು. ಜೊತೆಗೆ ಅಧ್ಯಾಪಕರ ಉತ್ಸಾಹಕ್ಕೆ ಪೂರವಾದ ಎಲ್ಲಾ ಅಂಶಗಳಾದ ನಿರಂತರ ತರಭೇತಿ, ಜೌದ್ಯೋಗಿಕ ಉನ್ನತಿ, ಸೇರಿದಂತೆ ವಿವಿಗಳಿಗೆ ಕುಲಸಚಿವ ಮತ್ತು ಕುಲಪತಿಗಳ ನೇಮಕ ಸೇರಿದಂತೆ ಎಲ್ಲಾ ಸಂತಿಗಳನ್ನು ಒಳಗೊಳ್ಳುವುದರ ಮೂಲಕ ಶಿಕ್ಷಣದ ಸಾಂಸ್ಥಿಕ ರಚನೆಯ ಕುರಿತು ಮಹತ್ವದ ದೃಷ್ಟಿಕೋನವನ್ನು ನೀತಿ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕರ್ನಾಟಕ ಕೇಂದ್ರಿಯ ವಿವಿ ಎಕ್ಸಿಕ್ಯುಟೀವ್ ಕೌನ್ಸಿಲ್ ಸದಸ್ಯೆಯಾಗಿರುವ ಪ್ರೊ. ವರ್ಷಾ ಶಿರ್ಗಾವಂಕರ್ ಅವರು ಸದರಿ ಶಿಕ್ಷಣ ನೀತಿ ಪ್ರಾಚೀನ ಭಾರತೀಯ ಮೌಲ್ಯಗಳನ್ನು ಸಮಾಜದಲ್ಲಿ ಸ್ಥಾಪಿಸುವ ಕಣ್ಣೋಟವನ್ನು ಒಳಗೊಂಡಿದೆ ಆ ಅರ್ಥದಲ್ಲಿ ಈ ನೀತಿ ನಿಜವಾದ ಅರ್ಥದಲ್ಲಿ ಶಿಕ್ಷಣವನ್ನು ವಸಾಹತು ಮೌಲ್ಯದಿಂದ ಆಚೆಗೆ ತಂದು ಭಾರತೀಯ ಕಣ್ಣೋಟದ ಮೂಲಕ ಜಗತ್ತನ್ನು ಗುರುತಿಸುವ ವಿಶಾಲ ಉದ್ದೇಶವನ್ನು ಹೊಂದಿದೆ ಎಂದು ವಿಶ್ಲೇಷಿಸಿದರು.

ಪೂರಕವಾಗಿ ಸದರಿ ನೀತಿ ಮಾತೃಭಾಷೆ ಶಿಕ್ಷಣ, ಅವನತಿ ಹೊಂದುತ್ತಿರುವ ಭಾಷೆಗಳ ಮರುಸ್ಥಾಪನೆ, ಉನ್ನತ ಶಿಕ್ಷಣ ಸಂಸ್ಥೆಗಳ ಸಂಶೋಧನೆಯನ್ನು ಸಮಾಜದ ಕಡೆಗೆ ಕೊಂಡೊಯ್ಯುವ ಯೋಜನೆಗಳ ನೀಲಿ ನಕ್ಷೆಯ ಹೊಂದಿದೆ ಈ ನೀತಿಯ ಅನುಷ್ಟಾನ ಮುಂದಿನ ದಿನಗಳಲ್ಲಿ ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಕಲಿಯುವ ವಾತಾವರಣ ನಿರ್ಮಿಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ  ಸಮ-ಕುಲಪತಿ ಪ್ರೊ. ಜಿ.ಆರ್ ನಾಯಕ್, ಸಾರ್ವಜನಿಕ ಆಡಳಿತ ವಿಭಾಗದ ಸಂಚಾಲಕರಾದ ಡಾ. ಜೇವಿಲ್, ಸಹಾಯಕ ಪ್ರಾಧ್ಯಾಪಕರಾದ ಡಾ.ಕಿರಣ್ ಗಾಜನೂರು, ಡಾ. ಮಲ್ಲಿಕಾರ್ಜುನ ಹೂಗಾರ್ ಮತ್ತು ಸಂದೀಪ್ ಇನಾಂಪುಡಿ ಹಾಜರಿದ್ದರು, ಅಲೋಕ್ ಕುಮಾರ್ ಗೋರವ್ ಕಾರ್ಯಕ್ರಮ ನಿರೂಪಿಸಿದರು, ಪ್ರೊ. ರೋಮೆಟ್ ಜಾನ್ ಸ್ವಾಗತಿಸಿದರು, ಡಾ. ಜೇವಿಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here