ಅಂತರ ರಾಜ್ಯ ಬೈಕ್ ಕಳ್ಳರ ಬಂಧನ: 40 ಬೈಕ್ ಗಳು ಜಪ್ತಿ

0
1205

ಕಲಬುರಗಿ: ಡಿಸೆ೦ಬರ್‌ ತಿಂಗಳಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನರೋಣಾ ಪೊಲೀಸರು ಕಾರ್ಯಚರಣೆ ನಡೆಸಿ ಮೂವರು ಅಂತರಾಜ್ಯ ಬೈಕ್ ಕಳ್ಳರು ಸೇರಿ 40 ಬೈಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ನರೋಣಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದಂಡಪ್ಪ, ಎ.ಎಸ್‌.ಐ ದೇವಿಂದ್ರಪ್ಪಾ ಶಿವಾನ೦ದ ಅವರ ನೇತೃತ್ವದ ತಂಡದ  ಸಿಬ್ಬಂದಿಯಾದ ಸರಣಗೌಡ, ಭಗವಂತರಾಯ, ಶಾ೦ತಕುಮಾರ, ಈರಣ್ಣಾ, ಆನ೦ದ, ಶಶಿಕಾಂತ, ವಿಠಲ್‌, ಕನಕರೆಡ್ಡಿ, ರಾಮಲಿಂಗ,  ಚಂದ್ರಕಾ೦ತ,  ಸತಿಶ್ಚಂದ್ರ,  ಬಸವರಾಜ ಕಲಶೆಟ್ಟಿ, ಬಸವರಾಜ, ಸತೀಶ, ಠಾಕೂರ, ಪ್ರದೀಪ, ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿರುವಾಗ ಬೋದನ್‌ ಕ್ರಾಸ್‌ ಹತ್ತಿರ ಇಬ್ಬರು ಮೊಟಾರ್‌ ಸೈಕಲ್‌ ಸವಾರರನ್ನು ಬಲವಾದ ಸಂಶಯದ ಮೇಲೆ ಪಶಕ್ಕೆ ತಗೆದುಕೊಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾಗ ಈ ಅಂಶ ಬೆಳಕಿಗೆ ಬಂದಿದೆ.

Contact Your\'s Advertisement; 9902492681

ತಾಜ ನಗರ ನಿವಾಸಿ ಇಸ್ಮಾಯಿಲ್‌ ಖಾಜಾಮೈನೊದ್ದಿನ ಜಮಾದಾರ, (26), ಗಫಾರ  ಜಬ್ಬಾರ ಜಮಾದಾರ (20), ಬೇಳಮಗಿ ಗ್ರಾಮದ ನಿವಾಸಿ ಧೂಳಪ್ಪಸಿದ್ಧಾರೂಢ ಸುತಾರ (36) ಹಾಗೂ ಭಾಲ್ಕಿಯ ಯನಕೂರ ಗ್ರಾಮದ ನಿವಾಸಿ ಗೌಸೊದ್ದಿನ ಮಹ್ಮದ ಆರೋಪಿಗಳು ಎಂದು ಗುರುತಿಸಲಾಗಿದೆ. ಸದ್ಯ ಗೌಸೊದ್ದಿನ ಮಹ್ಮದ ತಲೆಮರೆಸಿಕೊಂಡಿದ್ದು ಈತನ ಪತ್ತೆಗಾಗಿ ಪೊಲೀಸರು ಜಾಲಬೀಸಿದ್ದಾರೆ.

ಕೇಂದ್ರಿಯ ವಿಶ್ವವಿದ್ಯಾಲಯದ ಮೈನ್‌ಗೇಟ್‌ ಎದುರಿನಿಂದ ಮತ್ತು ಕಲಬುರಗಿ ನಗರದ ವಿವಿಧ ಸ್ಥಳಗಳಿಂದ ಹಾಗೂ ಕಮಲಾಪೂರ, ಮಾಹಾಗಾಂವ, ಹಾಗೂ ಬೀದರ್‌ ನಗರ ಮತ್ತು ಜಹೀರಾಬ್ಲಾದ ನಗರದ ವಿವಿಧ ಸ್ಥಳಗಳಿಂದ ಒಟ್ಟು 40 ಮೊಟಾರ್‌ ಸೈಕಲಗಳು ಕಳ್ಳತನ ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ಪ್ರಕರಟಣೆಯಲ್ಲಿ ತಿಳಿಸಿದ್ದಾರೆ.

ಸದರಿ ಆರೋಪಿಗಳಿಂದ ಕಳ್ಳತನ ಮಾಡಿದ ಒಟ್ಟು 40 ಮೊಟಾರ್‌ ಸೈಕಗಳನ್ನು ಪತ್ತೆಮಾಡಿ ಅವುಗಳ ಅಂದಾಜು 2100000/- ರೂ ಕಿಮೃತ್ತಿನ ಮೊಟಾರ್‌ ಸೈಕಲ ಗಳು  ಹಾಗೂ 3 ಜನ ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇಸ್ಮಾಯಿಲ್‌ ಜಮಾದಾರ ಈತನ ಹತ್ತಿರ ಒಟ್ಟು 14 ಮೊಟಾರ್‌ ಸೈಕಲಗಳು. ಗಫಾರ ಜಮಾದಾರ ಈತನ ಹತ್ತಿರ ಒಟ್ಟು 13 ಮೊಟಾರ್‌ ಸೈಕಲಗಳು, ಧೂಳಪ್ಪಾ ಸೂತಾರ ಈತನ ಹತ್ತಿರ ಒಟ್ಟು 13 ಮೊಟಾರ್‌ ಸೈಕಲಗಳು, ಅವರವರಿಗೆ ಸಂಬಂಧಪಟ್ಟ ಗೌಪ್ಯವಾದ ಸ್ಥಳಗಳಿಂದ ಮತ್ತು ಮನೆಯಿಂದ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here