ಅಂಗನವಾಡಿ ದೇವಾಲಯಕ್ಕೆ ಸಮಾನ, ಅಲ್ಲಿನ ಮಕ್ಕಳು ದೇವರಿಗೆ ಸಮಾನ-ಮತ್ತಿಮಡು

0
102

ಶಹಾಬಾದ:ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಂಗನವಾಡಿ ಕೇಂದ್ರ ಪ್ರಮುಖ ಘಟ್ಟ, ಅಂಗನವಾಡಿ ದೇವಾಲಯಕ್ಕೆ ಸಮಾನ, ಅಲ್ಲಿ ಕಲಿಯುವ ಮಕ್ಕಳು ದೇವರಿಗೆ ಸಮಾನ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಶನಿವಾರ ನಂದೂರ(ಕೆ) ಗ್ರಾಮದಲ್ಲಿ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಕ್ಕಳ ಪ್ರಥಮ ಪಾಠಶಾಲೆ ಅಂಗನವಾಡಿಯಾಗಿರುವುದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಕೆಲಸವಾಗಬೇಕು. ಮಾದರಿ ಅಂಗನವಾಡಿ ಕೇಂದ್ರವಾಗಲು ಊರಿನ ಹಿರಿಯರು ನಿಗಾವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪದಾರ್ಥಗಳು ದುರುಪಯೋಗವಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಅಲ್ಲದೇ ಸರಕಾರದಿಂದ ಸಿಗುವ ಸವಲತ್ತುಗಳು ಕಡ್ಡಾಯವಾಗಿ ಮಕ್ಕಳಿಗೆ ತಲುಪಬೇಕೆಂದು ಹೇಳಿದರು.

ಅರುಣಕುಮಾರ ಹಿರೇಗೌಡ,ಶಿವಕುಮಾರ ಹಿರೇಗೌಡ, ಬಸವರಾಜ ಪಾಟೀಲ, ಗಂಗಾಧರ ಅಪ್ಪಚಂದ್,ಪ್ರಭು ಕಾಳನೂರ,ಜಗದೀಶ ಪಾಟೀಲ,ಶರಣಗೌಡ ಪಾಟೀಲ ಬೇನೂರ, ಫಯೀಮ್ ಹುಸೇನ್, ಶಿವಕುಮಾರ ಗುತ್ತೆದಾರ,ಮಂಜು ಬಿರಾದಾರ,ಕಲ್ಲಪ್ಪ ಅಪ್ಪಚಂದ್,ಅಂಬಣ್ಣ ಅಕ್ಕಲಕೋಟ,ಗುರುಶಾಂತಪ್ಪ ಬೆಳಗುಂಪಾ,ನಾಗಯ್ಯಸ್ವಾಮಿ,ಬಸವಂತರಾಯ ಹೂಗಾರ, ಮಲ್ಲು ಹಿರೇಗೌಡ,ಬಸವರಾಜ ಪಾಳಾ, ಭೀಮಾಶಂಕರ ಹೂಗಾರ, ಚಂದ್ರುಗೌಡ ಪಾಟೀಲ,ಬಾಕುಸಿಂಗ ಕುಸನೂರ, ಅರುಣ ರಾಠೋಡ,ವಿರೇಶ ಹೂಗಾರ, ಬಸವರಾಜ ಗ್ಯಾರೇಜ, ಬಸವರಾಜ ದೇವಣಿ,ಮಹೇಶ ಬೆಳುಂಪಾ, ಮಲ್ಲಿಕಾರ್ಜುನ್ ಮುಗುಳನಾಗಾವ ಇತರರು ಇದ್ದರು.

ನಂತರ ನಂದೂರ(ಕೆ) ಗ್ರಾಮಸ್ಥರ ವತಿಯಿಂದ ಶಾಸಕ ಬಸವರಾಜ ಮತ್ತಿಮಡು ಹಾಗೂ ಅವರ ಧರ್ಮಪತ್ನಿ ಜಯಶ್ರೀ ಮತ್ತಿಮಡು ಅವರನ್ನು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here