ತಳವಾರ, ಪರಿವಾರ ಸಮೂದಾಯಗಳಿಗೆ ಎಸ್ ಟಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಸಿಎಂಗೆ ಶಾಸಕ ಖರ್ಗೆ ಪತ್ರ

0
107

ಕಲಬುರಗಿ: ಕೇಂದ್ರ ಸರಕಾರದ ಆದೇಶ ಹಾಗೂ ರಾಜ್ಯ ಸರಕಾರದ‌ ಅಧಿಸೂಚನೆಯಂತೆ ತಳವಾರ ಹಾಗೂ ಪರಿವಾರ ಸಮುದಾಯವರಿಗೆ ಪರಿಶಿಷ್ಠ ಪಂಗಡ ಪ್ರಮಾಣಪತ್ರ ದೊರಕಿಸಿಕೊಡುವಂತೆ ಸಿಎಂ ಯಡಿಯೂರಪ್ಪ‌ ಅವರಿಗೆ ಶಾಸಕರಾದ ಪ್ರಿಯಾಂಕ್ ಖರ್ಗೆ ಆಗ್ರಹಿದ್ದಾರೆ.

ಈ ಕುರಿತು ಸಿಎಂ ಅವರಿಗೆ ಪತ್ರ ಬರೆದಿರುವ ಶಾಸಕರು, ಕೇಂದ್ರದಲ್ಲಿರುವ ರಾಜ್ಯದ ಓಬಿಸಿ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 6 ಹಾಗೂ ರಾಜ್ಯದಲ್ಲಿನ ಓಬಿಸಿ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 88 ( H) ನಲ್ಲಿ ಬರುವ ತಳವಾರ ಹಾಗೂ ಪರಿವಾರ ಸಮೂದಾಯಗಳು ಎಸ್ ಟಿ ಪಟ್ಟಿಯಲ್ಲಿರುವ ನಾಯಕ ಹಾಗೂ ನಾಯ್ಕಡ ಸಮೂದಾಯಗಳ ಸಮನಾಂತರ ಪದಗಳೆಂದು ಸದರಿ ಸಮೂದಾಯಗಳನ್ನು ಎಸ್ ಟಿ ಪಟ್ಟಿಗೆ ಸೇರಿಸುವಂತೆ ಕರ್ನಾಟಕ ರಾಜ್ಯ ಬುಡಕಟ್ಟು ಅಧ್ಯಯನ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ದಿನಾಂಕ 25-02-2014 ರಂದು ಪ್ರಸ್ತಾವನೆ ಸಲ್ಲಿಸಿತ್ತು.

Contact Your\'s Advertisement; 9902492681

ಈ ಪ್ರಸ್ತಾವನೆಯನ್ನು ಮಾನ್ಯ ಮಾಡಿದ ಕೇಂದ್ರ ಸರಕಾರ ದಿನಾಂಕ 12-02-2020 ರಂದು ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡು ನಂತರ ರಾಷ್ಟ್ರಪತಿಗಳ ಅಂಕಿತ ಪಡೆದುಕೊಳ್ಳಲಾಯಿತು. ತರುವಾಯ, ದಿನಾಂಕ 20.03.2020 ರಂದು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಎಸ್ ಟಿ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 38 ರಲ್ಲಿ ನಾಯಕ, ನಾಯ್ಕಡ ಜಾತಿಗೆ ಸಮನಾರ್ಥಕ ಪದಗಳಾದ ತಳವಾರ ಹಾಗೂ ಪರಿವಾರ ಸಮೂದಾಯಗಳನ್ನು ಎಸ್ ಟಿ ಪಟ್ಟಿಗೆ ಸೇರಿಸುವಂತೆ ಗೆಜೆಟ್ ಪ್ರಕಟಿಸಿ ತಿದ್ದುಪಡಿ ಮಾಡಿ ಆದೇಶಿಸಲಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಕೇಂದ್ರ ಸರಕಾರದ ಆದೇಶದ ನಂತರ ರಾಜ್ಯ ಸರಕಾರ ದಿನಾಂಕ 28.05.2020 ರಂದು ತಳವಾರ ಹಾಗೂ ಪರಿವಾರ ಸಮೂದಾಯಗಳನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಕುರಿತು ಗೆಜೆಟ್ ಹೊರಡಿಸಿದ್ದರೂ ಕೂಡಾ ಕಂದಾಯ ಇಲಾಖೆಯ ಅಧಿಕಾರಿಗಳು ಸದರಿ ಪರಿವಾರ ಹಾಗೂ ತಳವಾರ ಸಮೂದಾಯಗಳು ಗಂಗಾಮತ, ಕೋಲಿ, ಕಬ್ಬಲಿಗ ಜಾತಿಗೆ ಸೇರಿದವು ಎಂದು ಕಾರಣ ಹೇಳಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಶಾಸಕರು ಪತ್ರದಲ್ಲಿ ಹೇಳಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳ ನಿರಾಕರಣೆಯಿಂದಾಗಿ ತಳವಾರ ಹಾಗೂ ಪರಿವಾರ ಸಮೂದಾಯದವರಿಗೆ ಉದ್ಯೋಗ, ನೇಮಕಾತಿ ಹಾಗೂ ಇತರೆ ಸೌಲಭ್ಯ ದೊರಕದಂತಾಗಿ ಅನ್ಯಾಯವಾಗುತ್ತಿದೆ. ಕೇಂದ್ರ ಸರಕಾರದ‌ಆದೇಶ ಹಾಗೂ ರಾಜ್ಯ ಸರಕಾರದ ಅಧಿಸೂಚನೆಯ ಅನ್ವಯ ತಳವಾರ ಹಾಗೂ ಪರಿವಾರ ಸಮೂದಾಯವರಿಗೆ ಎಸ್ ಟಿ ಪ್ರಮಾಣ ಪತ್ರ ದೊರಕಲು ಆದೇಶ ನೀಡಬೇಕೆಂದು ಸಿಎಂ ಅವರನ್ನು ಶಾಸಕ‌ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here