5 ಕೋಟಿ ಲಂಚ ಪ್ರಕರಣ: ಇಬ್ಬರು ಜಿಎಸ್ಟಿ ಅಧಿಕಾರಿಗಳ ವಿರುದ್ದ ಸಿಬಿಐಯಿಂದ ದೂರು ದಾಖಲು

0
48

ನವದೆಹಲಿ: ಜಿಎಸ್‌ಟಿಯ ತೆರಿಗೆ ವಂಚನೆ ಶಾಖೆಯ ಇಬ್ಬರು ಮಾಜಿ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಪ್ರಕರಣ ದಾಖಲಿಸಿದೆ. ಪ್ರಕರಣದ ಇತ್ಯರ್ಥಕ್ಕೆ ಇಬ್ಬರೂ ಅಧಿಕಾರಿಗಳು 5 ಕೋಟಿ ರೂ.ಗಳ ಲಂಚಕ್ಕೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಎಸ್ಟಿ ಇಲಾಖೆಯ ಮಾಜಿ ಉಪ ಆಯುಕ್ತ ಸುಧಾ ರಾಣಿ ಚಿಲ್ಕಾ ಮತ್ತು ಇಲಾಖೆಯ ಅಧೀಕ್ಷಕ ಶ್ರೀನಿವಾಸ್ ಗಾಂಧಿ ಬೊಲಿನೇನಿ ವಿರುದ್ಧ ಪ್ರಕರಣ ದಾಖಲಾಗಿದೆ.

Contact Your\'s Advertisement; 9902492681

ಇಬ್ಬರು ಅಧಿಕಾರಿಗಳು ಹೈದರಾಬಾದ್‌ನಲ್ಲಿ ನೇಮಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು, ಇಬ್ಬರು ಅಧಿಕಾರಿಗಳು 2019 ರ ಏಪ್ರಿಲ್ 15 ರಂದು ಇನ್ಫಿನಿಟಿ ಮೆಟಲ್ ಪ್ರಾಡಕ್ಟ್ಸ್ ಲಿಮಿಟೆಡ್ ನಿಂದ 10 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಂಪನಿಯು ತೆರಿಗೆ ಸಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಯನ್ನು ಎದುರಿಸುತ್ತಿದೆ ಇವರು 11 ತಿಂಗಳ ಪ್ರಾಥಮಿಕ ತನಿಖೆಯ ನಂತರ ಈ ಬಂಧನ ಮಾಡಲಾಗಿದೆ.

ತನಿಖೆಯ ಸಮಯದಲ್ಲಿ, ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಏಜೆನ್ಸಿ ಸಾಕಷ್ಟು ಪುರಾವೆಗಳನ್ನು ಕಂಡುಹಿಡಿದಿದೆ. ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, ಸಿಬಿಐ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಂದ ಅನುಮತಿ ಕೋರಿತ್ತು ಎಂಬ ವಿಷಯ ತಿಳಿದುಬಂದಿದೆ.

ಹೈದರಾಬಾದ್‌ನ ಮುಸದ್ದಿಲಾಲ್ ಜ್ಯುವೆಲ್ಲರ್ಸ್ ವಿರುದ್ಧ ವಂಚನೆ ಪ್ರಕರಣ ಮತ್ತು ಪ್ರಸಿದ್ಧ ಗಣಿಗಾರಿಕೆ ಉದ್ಯಮಿ ಜನಾರ್ದನ್ ರೆಡ್ಡಿ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವೂ ಇದರಲ್ಲಿ ಸೇರಿದೆ. ಬೊಲಿನೇನಿ ಗಾಂಧಿ ಮತ್ತು ಅವರ ಪತ್ನಿಯ ಮೇಲೆ 2019 ರಲ್ಲಿ ಅಧಿಕ ಸಂಪತಿಹೊಂದಿರುವ ಆರೋಪವು ಹೇಳಿಬಂದಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here