ಕವಿತಾಳ: ಪಟ್ಟದ ಡಾ. ಬಿ. ಆರ್. ಅಂಬೇಡ್ಕರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ವಲಯ ಘಟಕದ ವತಿಯಿಂದ ಶಾಲಾ ಸ್ವಚ್ಚತೆ ಹಾಗೂ ಸಸಿ ನೇಡುವ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .
ಕಾರ್ಯಕ್ರಮ ವನ್ನ CRP ಹುಸೇನ್ ಬಾಷ ರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು. SFI ಅಂತ ವಿದ್ಯಾರ್ಥಿ ಸಂಘಟನೆ ಸಸಿನೆಡುವ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುವುದು ಸಮಾಜಮುಖಿಯಾಗಿ ಕಾರ್ಯಕ್ರಮ ಮಡುತ್ತಿರುವುದ ಸಂತಸದ ವಿಷಯ ಸಂಘಟನೆ ಮುಂದೆ ಇಂತಹ ಮಾದರಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಸಮಾಜ ಮುಖಿಯಾದ ಚಿಂತನೆ ಮಾಡಲು ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡಲು ಸಂಘಟನೆಗಳು ಮುಂದಾಗಬೇಕು ಎಂದರು.
ವಲಯ ಘಟಕ ಅಧ್ಯಕ್ಷ ಮೌನೇಶ ಬುಳ್ಳಾಪುರ SFI ಸಂಘಟನೆ ನಿರಂತರವಾಗಿ ಕವಿತಾಳದಲ್ಲಿ ವಿದ್ಯಾರ್ಥಿಗಳ ಧ್ವನಿಯಾಗಿ ಕೆಲಸ ಮಾಡುತ್ತಾ ಬರುತ್ತಿದೆ. ಅನೇಕ ಹೋರಾಟಗಳ ಪ್ರತಿಫಲವಾಗಿ ಶೈಕ್ಷಣಿಕ ವಾಗಿ ಕವಿತಾಳ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಿದೆ. ಇನ್ನು ಬಹಳಷ್ಟು ಸಮಸ್ಯೆಗಳು ಹಾಗೇಯೆ ಉಳಿದಿವೆ. ನಿರಂತರವಾಗಿ ಇನ್ನು ಮುಂದೆ ಹೆಚ್ಚು ಹೆಚ್ಚು ಹೋರಾಟ, ಕಾರ್ಯಕ್ರಮ ಹಮ್ಮಿಕೊಳ್ಳುತ್ತೆವೆ ಎಂದರು.
ಈ ಸಂದರ್ಭದಲ್ಲಿ CRP ಹುಚ್ಚರೆಡ್ಡಿ, ಮುಖ್ಯಗುರುಗಳಾದ ಇಂದುಮತಿ SDMC ಅಧ್ಯಕ್ಷರಾದ ಶಾಂತಪ್ಪ ತುಪ್ಪದೂರು,SFl ವಲಯ ಘಟಕ ಕಾರ್ಯದರ್ಶಿ ವೆಂಕಟೇಶ್ ಉಪಾಧ್ಯಕ್ಷ ನಾಗಮೋಹನ್ ಸಿಂಗ್ ಸಹಕಾರ್ಯದರ್ಶಿ ಪ್ರೇಮ್ ಕುಮಾರ್ DYFI ಮುಖಂಡ ಮಹಾದೇವ್ ಹಾಗೂ R ಬಸವರಾಜ್ ರೋಡಲಬಂಡಿ ಹಾಗೂ ವರದಿಗಾರರಾದ ಪ್ರಾನ್ಸಿಸ್, ಪ.ಪಂಚಾಯಿತಿ ಸದಸ್ಯ ಬಸವರಾಜ ಮುಖಂಡರಾದ ಶಂಕರ್ ಬಸವರಾಜ ರೋಡಲಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.