ಕಲಬುರಗಿ: ರಾಜ್ಯದಲ್ಲಿ ಗಾಂಜಾ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇತ್ತೀಚಿಗೆ ಕಾಳಗಿ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಬೆಂಗಳೂರು ಪೊಲೀಸರು ಕಾರ್ಯಚರಣೆ ನಡೆಸಿದರು. ಈಗ ಮತ್ತೆ ಚಿಂಚೋಳಿ ತಾಲ್ಲೂಕಿನಲ್ಲಿ 223 ಕೆ.ಜಿ ಗಾಂಜಾ ಬೆಳೆಯನ್ನು ಚಿಂಚೋಳಿ ಪೊಲೀಸರು ಕಾರ್ಯಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಡಿಓಎಸ್ಪಿ ವಿರಭದ್ರಯ್ಯ ಸಿಪಿಐ ಮಾಂತೇಶ್ ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ್ ರಾಠೋಡ್ ನೇತೃತ್ವದ ಸಿಬ್ಬಂದಿಗಳ ತಂಡಾ ನಿನ್ನೆ ಭರ್ಜರಿ ಕಾರ್ಯಚರಣೆ ನಡೆಸಿ ತಾಲ್ಲೂಕಿನ ಧರಿತಾಂಡಾದ ತೊಗರಿ ಹೊಲವೊಂದರಲ್ಲಿ ಗಾಂಜಾ ಬೆಳೆ ಬೆಳಿದಿರುವ ಬಗ್ಗೆ ಖಚಿತ ಮಾಹಿತಿ ಮೆರೆ ಪೊಲೀಸರು ದಾಳಿ ನಡೆಸಿದ್ದಾರೆ.
ಧಾಳಿಯಲ್ಲಿ ಧರಿತಾಂಡದ ನಿವಾಸಿಯಾದ ಧನಸಿಂಗ ರಾಮಚಂದ್ರ ರಾಠೋಡ್ (49) ಎಂಬ ಆರೋಪಿಯನ್ನು ಬಂಧಿಸಿ ಹೊಲದಲ್ಲಿ ಸುಮಾರು 200ಕ್ಕೂ ಹೆಚ್ಚು ಗಾಂಜಾ ಸಸಿಗಳು 223 ಕೆ.ಜಿಯ 10.5 ಲಕ್ಷದ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.