ಸಿಎಂ ಪ್ರತಿಭಟನಾ ಸ್ಥಳಕ್ಕೆ ಆಗಮಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ: ಎಸ್.ಟಿ ಹೋರಾಟ ಸಮಿತಿ

0
148

ಕಲಬುರಗಿ: ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ನಡೆಸುತ್ತೀರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ  ಮುಖ್ಯಮಂತ್ರಿಗಳು ಬಂದು ಮನವಿ ಸ್ವೀಕರಿಸಬೇಕು, ಒಂದು ವೇಳೆ ಬರದೆ ಹಾಗೆ ಹೋದರೆ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಜೆಡಿಎಸ್ ಜಿಲ್ಲಾ ಯೂತ್ ಅಧ್ಯಕ್ಷ ಅಲಿಮ್ ಇನಾಮ್ದಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಎದುರುಗಡೆ  ತಳವಾರ, ಪರಿವಾರ ಎಸ್.ಟಿ ಹೋರಾಟ ಸಮಿತಿ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಬೇಕೆಂದು ಕಳೆದ 18 ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಹಾಗೂ ಎರಡನೇ ದಿನದ ಸರದಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.

Contact Your\'s Advertisement; 9902492681

ಅವರು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ತಳವಾರ, ಪರಿವಾರ ಸಮಾಜದ ಜನರ ಬೇಡಿಕೆಯಾದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುತ್ತೇವೆ ಎಂದು  ಘೋಷಿಸಬೇಕು. ಅದು ಧರಣಿನಿರತ ಸ್ಥಳಕ್ಕೆ ಬಂದು. ಒಂದು ವೇಳೆ ಬರದೇ ಹೋದರೆ ಈ ಸಮುದಾಯದವರಿಗೆ ನ್ಯಾಯ ಸಿಗುವವರೆಗೂ ನಾವು ಅವರೊಂದಿಗೆ ಕೈಜೋಡಿಸಿ ನಿರಂತರವಾಗಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು.

ನಾಸಿರ್ ಹುಸೇನ್ ಉಸ್ತಾದ ಬೆಂಗಲ: ಜೆಡಿಎಸ್ ಮುಖಂಡರಾದ ನಾಸಿರ್ ಹುಸೇನ್ ಉಸ್ತಾದ ಪ್ರತಿಭಟನಾ ಸ್ಥಳಕ್ಕೆ ಭೇಟಿ ತಮ್ಮ ಬೆಂಬಲ ಸೂಚಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿಗಳಾದ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಗಳವರ ಗಮನಕ್ಕೆ ತರುತ್ತೇನೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಈ ಸಮುದಾಯದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ.

ಈ ಕಾರಣಕ್ಕೆ ನಿಮ್ಮ ತಳವಾರ ಸಮುದಾಯದ ಅಭ್ಯರ್ಥಿಯಾದ ಸುನಿತಾ ತಳವಾರ್ ಅವರಿಗೆ ಸೇಡಂ ಮತಕ್ಷೇತ್ರದಿಂದ ಸ್ಪರ್ಧಿಸಲು  ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದ್ದರು. ಈ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ನಿಮಗೆ ಇತರ ರಾಜಕೀಯ ಪಕ್ಷಗಳು ನಿಮ್ಮನ್ನು ಮತಬ್ಯಾಂಕು ಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಹೊರತು ನಿಮಗೆ ಯಾವುದೇ ರಾಜಕೀಯ ಸ್ಥಾನಮಾನವನ್ನಾಗಲಿ, ಅಧಿಕಾರವಾಗಲಿ ನೀಡಿಲ್ಲ. ಜೆಡಿಎಸ್ ಪಕ್ಷ ನಿಮ್ಮನ್ನು ಅತ್ಯಂತ ಗೌರವದಿಂದ ಕಾಣುತ್ತಿದೆ. ಇದು ನಿಮ್ಮೆಲ್ಲರ ಗಮನಕ್ಕೂ ಬಂದಿದೆ ಎಂದು ನಾನು ಭಾವಿಸಿದ್ದೇನೆ.

ನಾಳೆ ನಡೆಯುವ ಅಧಿವೇಶನದಲ್ಲಿ ನಿಮಗಾದ ಅನ್ಯಾಯದ ವಿರುದ್ಧ ಕುಮಾರಸ್ವಾಮಿಯವರು ಧ್ವನಿಯೆತ್ತುತ್ತಾರೆ. ನೀವು ನಿಮ್ಮ ಹಕ್ಕು ಪಡೆಯುವವರೆಗೆ ಹೋರಾಟ ನಿಲ್ಲದಿರಲಿ ನಾವು ನಿಮ್ಮ ಬೆಂಬಲಕ್ಕೆ ಸದಾ ಇರುತ್ತೇವೆ. ಇನ್ನೊಬ್ಬರಂತೆ ಸುಳ್ಳು ಆಶ್ವಾಸನೆ ಕೊಡುವುದಿಲ್ಲ ಎಂದು ಇಂದು ಹೇಳಿದರು.

ಇಂದು ಸರತಿ ಉಪವಾಸ ಸತ್ಯಾಗ್ರಹದಲ್ಲಿ ಸಿದ್ದು ತಳವಾರ, ಸಿದ್ದು ಬೂಸಾ, ಸಿದ್ದು ಸರಡಗಿ, ಶ್ರೀಪಾದ ಬಳಗುಂಪಿ,  ಶಿವಪ್ರಕಾಶ ಎಮ್ ಕುಳಿತಿದ್ದಾರೆ.

ಈ ಸಂದರ್ಭದಲ್ಲಿ  ದೆವೆಗೌಡ ತೆಲ್ಲೂರ,ಜಿಲ್ಲಾ ಕಾರ್ಯಧ್ಯಕ್ಷರು,ಮನೋಹರ ಪೊದ್ದಾರ,ಪ್ರವಿಣ ಜಾದವ,ಆನಂದ ಪಾಟೀಲ, ಅರವಿಂದ ರಂಜೊರಿ,ದೆವೇಂದ್ರ ಹಸನಾಪೂರ,ಮಾಣಿಕ ಶಾಹಾಪೂರಕರ್,ಶಪಿಕ ಪಟೇಲ,ನಸೀರ ಜಮನಾರ, ನಾಗರಾಜ ರೇವಣಕರ್,ಡಾ.ಸದಾ೯ರ ರಾಯಪ್ಪ , ರಾಜೇಂದ್ರ ರಾಜವಾಳ, ಸುನಿತಾ ತಳವಾರ್,ದೇವೇಂದ್ರ ಚಿಗರಳ್ಳಿ, ಚಂದ್ರಶೇಖರ ಜಮಾದಾರ ವಕೀಲರು, ಶರಣು ಕೋಳಿ,  ದಿಗಂಬರ ಡಾಂಗೆ, ಚಂದ್ರಕಾಂತ್ ಗಂವ್ಹಾರ ,ಅನಿಲ ಕಾಮಣ್ಣ ವಚ್ಚಾ, ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here