ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಹಸಿಲ್ದಾರರ ಪ್ರಾಣದ ಹಂಗನ್ನು ತೊರೆದು ರಕ್ಷಿಸಿದ ಸಾಹಸಿಗಳಿಗೆ ಸನ್ಮಾನ

0
140

ಚಿಂಚೋಳಿ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಹಸಿಲ್ದಾರರ ಪ್ರಾಣದ ಹಂಗನ್ನು ತೊರೆದು ರಕ್ಷಿಸಿದ ಸಾಹಸಿ ಸಿಬ್ಬಂದಿಗಳಿಗೆ ಇಂದು ಭಾರತ ಮುಕ್ತಿ ಮೊರ್ಚಾ ಸಂಘಟನೆ ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು .

ಸುರಿಯುವ ಧಾರಾಕಾರ ಮಳೆಯಲ್ಲಿಯೆ ಯಾದಗಿರಿ ತಹಸಿಲ್ದಾರರಾದ ಪಂಡಿತ್ ಬೀರಾದರ್ ರವರು ತಮ್ಮ ಕರ್ತವ್ಯ ಮುಗಿಸಿಕೊಂಡು ಸೇಡಮ್ ಮಾರ್ಗವಾಗಿ ಬೀದರಗೆ ತೆರಳುತ್ತಿರುವಾಗ  ಗಣಾಪೂರದ ಹತ್ತಿರ ನೀರಿನ ರಭಸಕ್ಕೆ ಕಾರು ಸಮೇತ ತಹಸಿಲ್ದಾರರು ಕೊಚ್ಚಿಕೊಂಡು ಹೋಗಿದರು.

Contact Your\'s Advertisement; 9902492681

ಹರಸಾಹಸ ಪಟ್ಟು ಗಿಡದ ಮೇಲೇರಿ ಕುಳಿತ ದ್ರಶ್ಯ ನೋಡುಗರ ಮನಕಲುಕುವಂತಿತ್ತು ಪೋಲಿಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಿಯರು  ತಮ್ಮ ಪ್ರಾಣದ ಹಂಗನ್ನು ತೋರೆದು ತಹಸಿಲ್ದಾರರಿಗೆ ಪ್ರಾಣಾಪಾಯದಿಂದ ಪಾರು ಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಯುವಕರಾದ ಜಾವೇದ್ ಸಿರೊಳ್ಳಿ, ರಘುರೆಡ್ಡಿ, ಅಗ್ನಿಶಾಮಕದಳದ ಆನಂದಕುಮಾರ್ ದುಖಾನ್ದಾರ್, ಸುನೀಲ್ ಸೋನಾರ್ ರವರಿಗೆ ಇಂದು ಚಿಂಚೋಳಿಯ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ, ಕಾಶಿರಾಮ್ ದೇಗಲ್ಮಡಿ, ಗೋಪಾಲ ಗಾರಂಪಳ್ಳಿ, ಉಲ್ಲಾಸ ಕೆರೊಳ್ಳಿ, ನಂದಕುಮಾರ ಹೂಡದಳ್ಳಿ, ನಂದುಕುಮಾರ ಭಕ್ತಂಪಳ್ಳಿ, ನಾಗೇಂದ್ರ ಗರಗಪಳ್ಳಿ, ಹರ್ಷವರ್ಧನ ಚಿಮ್ಮನಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here