ಕಲಬುರಗಿ: 371 ಜೆ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿ, 2000 ಕೋಟಿ ರೂಪಾಯಿ ಮೀಸಲಿಡಬೇಕು ಎಂದು ಒತ್ತಾಯಿಸಿ ನಯ ಸವೆರಾ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಈ ವೇಳೆಯಲ್ಲಿ ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಮಾತನಾಡಿ, ಹೆಸರಿಗಷ್ಟೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದೆ. ಆದರೆ ಭಾಗ ಅಭಿವೃದ್ಧಿಯಾಗಲು ಸಾಧ್ಯವಾಗುತ್ತಿಲ್ಲ, ಕಲ್ಯಾಣ ಕರ್ನಾಟಕ ಅಭಿವೃದ್ಧಿಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ ಭರ್ತಿ ಮಾಡಬೇಕು, ಅನೇಕ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದು, ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಆಗಿ ಒಂದು ವರ್ಷ ಆಯ್ತು ಆದರೆ ಇಲ್ಲಿಯವರೆಗೆ ಒಂದು ಬಜೆಟ್ ಇಲ್ಲ ,371 ಜೆ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಆಗಿಲ್ಲ. ಇಲ್ಲಿಯ ಜನರ ವಿವಿಧ ಬೇಡಿಕೆ ಗಳು 371 ಜೆ ಕಲಂ ವಿಶೇಷ ಕೋಶ ಪ್ರಧಾನ ಕಛೇರಿ ಬೆಂಗಳೂರುಗೆ ತೆರಳು ಅಗತ್ಯ ಉಂಟಾಗುತಿದೆ.
ಪ್ರದೇಶಿಕ ಕಛೇರಿ ಜಿಲ್ಲೆಯಲ್ಲಿ ಸ್ಥಾಪಿಸಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ನೀಡಿರುವ ತೀರ್ಪಿನಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು .ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಹೆಚ್ಚು ಬಲಪಡಿಸುವ ಮೂಲಕ ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಬೇಕು ಎಂದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಲಿಮ ಅಹಮದ್ ಚಿತಾಪುರ, ಸೈರಾ ಬಾನು ಅಬ್ದುಲ್ ವಾಹಿದ್, ಗೀತಾ ಮುದುಗಲ್, ಬಾಬಾ ಫಕ್ರುದ್ದಿನ್, ಅನ್ಸಾರಿ ಮುಬಿನ್ ಅನ್ಸಾರಿ ಇದ್ದರು.