ಕಲಬುರಗಿ: ಕೋವಿಡ್ ಹಾಗೂ ಆರ್ಥಿಕ ಸಂಕಷ್ಠದಲ್ಲಿರುವಾಗ, ಅವರ ಬದುಕಿನ ಮೇಲೆಯೇ ಮಾರಾಣಾಂತಿಕ ಧಾಳಿಗಳನ್ನು ಈ ಅವಧಿಯಲ್ಲಿ ಸುಮಾರು 11 ಸುಗ್ರೀವಾಜ್ಞೆ ವಾಪಸ್ ಪಡೆಯಬೇಕೆಮದು ಸಿಪಿಐಎಂ ಜಿಲ್ಲಾ ಸಮಿತಿ ಶರಣಬಸಪ್ಪ ಮಮಶೇಟ್ಟಿ ಅವರ ನೇತೃತ್ವದಲ್ಲಿ ಕಲಬುರಗಿ ಲೋಕಸಭಾ ಸದಸ್ಯರ ಕಾರ್ಯಾಲಯದ ಮುಂದೆ ಪ್ರತಿಭಟನೆ ಆಗ್ರಹಿಸಿದರು.
ದೇಶ ಕಳೆದ ಒಂದು ದಶಕದಿಂದ ಗಂಭೀರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ಎಳೆಂಟು ತಿಂಗಳಿಂದ ಕೋವಿಡ್ – 19 ರ ವೈರಾಣು ಸಾಂಕ್ರಾಮಿಕ ಧಾಳಿಗೆ ಸಿಲುಕಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇದರ ಹಾವಳಿಯನ್ನು ತಡೆಯಲು ಸಾಧ್ಯವಿರುವಾಗ ನಮ್ಮ ದೇಶದಲ್ಲಿ ಅದು ವೇಗವಾಗಿ ವಿಸ್ಥರಿಸಲ್ಪಡುತ್ತಿದೆ. ಕರ್ನಾಟಕ ರಾಜ್ಯವು ಈ 2020 ರಲ್ಲಿ ಬರ ಹಾಗೂ 2-3 ಬಾರಿ ಅತೀವೃಷ್ಠಿ ಹಾಗೂ ಪ್ರವಾಹಗಳಿಗೆ ತುತ್ತಾಗಿದೆ. ಈ ಎಲ್ಲಾ ಸಂದರ್ಭಗಳಿಂದಲೂ ದೇಶದ ಹಾಗೂ ರಾಜ್ಯದ ಸಾಮಾನ್ಯ ಜನತೆಯ ಹಿತವನ್ನು ರಕ್ಷಿಸುವಲ್ಲಿ ಕೇಂದ್ರ ಸರಕಾರ ಘೋರವಾಗಿ ವಿಫಲವಾಗಿದೆ. ಬದಲಿಗೆ ದೇಶದ ಹಾಗೂ ವಿದೇಶಗಳ ಬಹುರಾಷ್ಟ್ರೀಯ ಸಂಸ್ಥೆಗಳ ವ್ಯಾಪಕವಾದ ಲೂಟಿಗೆ ದೇಶವನ್ನು ತೆರೆಯುತ್ತಿರುವುದು ಖಂಡನೀಯವಾಗಿದೆ ಎಂದು ಮಮಶೇಟಿ ಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ – 19 ರ ಪರಿಹಾರವಾಗಿ ಮುಂದಿನ ಆರು ತಿಂಗಳ ಕಾಲ ಎಲ್ಲಾ ಆದಾಯ ತೆರಿಗೆ ವ್ಯಾಪ್ತಿ ಕೆಳಗೆ ಬಾರದಿರುವ ಕುಟುಂಬಗಳಿಗೆ ತಲಾ ಮಾಸಿಕ 7,500 ರೂಗಳ ಹಾಗೂ ತಲಾ ವ್ಯಕ್ತಿಗೆ 10 kg ಸಮಗ್ರ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ನಗರ ಪ್ರದೇಶಕ್ಕೂ ಮತ್ತು ಕನಿಷ್ಟ 200 ದಿನಗಳಿಗೆ ವಿಸ್ತರಿಸಬೇಕು. ಕೂಲಿಯನ್ನು ಹೆಚ್ಚಿಸಬೇಕು. ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಘೋಷಿಸುವಂತೆ, ಕೇಂದ್ರ ಸರಕಾರ ಆಸ್ಪತ್ರೆ ಸೌಕರ್ಯಗಳನ್ನು ವಿಸ್ತರಿಸಬೇಕು ಮತ್ತು ಉಚಿತ ಶುಶ್ರೂಷೆಗೆ ವ್ಯವಸ್ಥೆ ಮಾಡಬೇಕು ಹಾಗೂ ಖಾಸಗಿ ಆರೋಗ್ಯ ಸೌಕರ್ಯಗಳಿಗೆ ತರ್ಕ ಬದ್ಧ ದರಗಳನ್ನು ನಿಗದಿ ಮಾಡಬೇಕು ಎಂದು ಆಗ್ರಹಿಸಿರು.
ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರ ಬೇಕಾಗಿರುವ ಜಿ.ಎಸ್.ಟಿ ಬಾಕಿ, ಬಜೆಟ್ ಅನುದಾನದ ಬಾಕಿ, ಬರ ಹಾಗೂ ಅತೀವೃಷ್ಟಿ ಪರಿಹಾರ, ಕೋವಿಡ್ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ, ಸಾರ್ವಜನಿಕ ಉದ್ಯಮಗಳ ಹಾಗೂ ಸಂಸ್ಥೆಗಳ ಖಾಸಗೀಕರಣವನ್ನು ಹಿಂಪಡೆಯಬೇಕು. ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿ ಸಾರ್ವಜನಿಕ ರಂಗವನ್ನು ಬಲಪಡಿಸಿ, ಭಾರತೀಯ ಸಂವಿಧಾನವನ್ನು ಮತ್ತು ಅದರ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಯ ಮೂಲಭೂತ ಅಂಶಗಳ ಖಾತರಿಯನ್ನು ರಕ್ಷಿಸಬೇಕು
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ರಾಜಕೀಯ ಚಟುವಟಿಕೆಗಳನ್ನು, ರಾಜ್ಯದ ಸ್ಥಾನಮಾನವನ್ನು ಹಾಗೂ ಕಲಮು 370ನ್ನು ಮರುಸ್ಥಾಪಿಸಬೇಕು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೇರಿದಂತೆ ಎಲ್ಲ ನಿರ್ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಸಾರ್ವಜನಿಕ ಸಾರಿಗೆ ಮತ್ತು ಇತರ ಸೇವೆಗಳೊಂದಿಗೆ ಸಂಪೂರ್ಣ ಸಂಪರ್ಕಗಳನ್ನು ಮತ್ತೆ ಸ್ಥಾಪಿಸಿ ಸೇರಿದಂತೆ ಮುಂತಾದ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಪ್ರಧಾನಿ ಮಂತ್ರಿಗಳಿಗೆ ಮನವಿ ಮಾಡಿದರು.
ಈ ವೇಳೆಯ ಅಶೋಕ್ ಮ್ಯಾಗೆರಿ, ಭಿಮಶೇಟ್ಟಿ ಯಂಪಳಿ, ಮಹಮ್ಮದ್ ಮೋಖದ್ದಮ್, ಗುರುನಂದೇಶ ಕೋಣಿನ ಸೇರಿದಂತೆ ಮುಂತಾದವರು ಇದ್ದರು.