ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ

0
34

ಕಲಬುರಗಿ: ಸರಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕಿಯರ ಒಳಗೊಂಡ ಸಂಘದ ರಾಜ್ಯಾಧ್ಯಕ್ಷೆ ಡಾ: ಲತಾ ಎಸ್ ಮುಳ್ಳೂರ್ ಅವರ ಅನುಮೋದನೆಯಂತೆ ನಗರದ ಖಾಸಗಿ ಸಭಾಂಗಣದಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಜಿಲ್ಲಾಧ್ಯಕ್ಷೆ ಸೇವಂತಾ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಕೋಶಾಧ್ಯಕ್ಷೆ ಮಲ್ಲಮ್ಮ ಮತ್ತಿಮೂಡ್, ಉಪಾಧ್ಯಕ್ಷರಾಗಿ ಗುರುಬಾಯಿ ಹೇರಿ, ವಿಶಾಲಾಕ್ಷಿ ಎಸ್, ಸಾವಿತ್ರಿ ಚಾಂದಕವಟೆ, ಶೋಭಾ ಪತ್ತಾರ್, ಸುಧಾ ಬಿರಾದಾರ್, ಸಹ ಕಾರ್ಯದರ್ಶಿಯಾಗಿ ಬೇಬಿ ಫಾತಿಮಾ, ಇಂದಿರಾ ಪೂರ್ಣಸಿಂಗ್, ಜ್ಯೋತಿ ಅಗ್ನಿಹೋತ್ರಿ, ಅನುಪೂರ್ಣ ಸೋಮಾ, ಸುರೇಖಾ ಚಂದುರೆ. ಮೀನಾಕ್ಷಿ, ಜಯಶ್ರೀ ನಾಗಶೆಟ್ಟಿ, ರೇಣುಕಾ, ಸಂಘಟನಾ ಕಾರ್ಯದರ್ಶಿಯಾಗಿ ಸುಜಾತ, ಉಮಾ ಮಠಪತಿ, ವಿದ್ಯಾವತಿ ಚವ್ಹಾಣ, ಚಂದ್ರಕಲಾ ಪವಾರ್, ಜಗದೇವಿ ಲಿಂಗಯ್ಯ, ಸವಿತಾ ಅವಟೆ, ವಿಶಾಲಾಕ್ಷಿ, ಜಗದಮಹೇಶ್ವರಿ ಗೂಳಗೆ, ರಶ್ಮಿ ಗೂಡಬೋಲೆ ಇವರನ್ನು ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ಈ ಸಭೆಯಲ್ಲಿ ಸಂಘದ ಮೂಲ ಉದ್ದೇಶವೇನೆಂದರೆ ಮಹಿಳಾ ಶಿಕ್ಷಕಿಯರ ಅನೇಕ ಸಮಸ್ಯೆಗಳು ಮತ್ತು ಕಾರ್ಯನಿರತ ಸಂದರ್ಭದಲ್ಲಿ ಕಷ್ಟಕರ ವಿಚಾರ ಬಂದಲ್ಲಿ ಅವುಗಳ ವಿರುದ್ಧ ಹೋರಾಟ ನಡೆಸಬೇಕು.
ಮಹಿಳಾ ಜಾಗೃತಿ ಸಮಾವೇಶ ಸಬಲೀಕರಣ ಗುಣಮಟ್ಟದ ಶಿಕ್ಷಣದ ಚಿಂತನೆ ಸೇವೆ ಪುರಸ್ಕಾರ ತರಬೇತಿ ಕಾರ್ಯಾಗಾರಗಳು ಆಯೋಜಿಸಲು ಕಾರ್ಯ ಸಮ್ಮುಖವಾಗುತ್ತದೆ.

೧೨ ತಾಲೂಕುಗಳಲ್ಲಿ ಮಹಿಳಾ ಶಿಕ್ಷಕಿಯರ ಸಂಘ ರಚನೆ ಮಾಡಲು ಜಿಲ್ಲಾ ಕಮಿಟಿ ಅತಿಶೀಘ್ರದಲ್ಲಿ ಮಾಡುತ್ತದೆ ಕಲಬುರಗಿ ಸಮಗ್ರಹ ಮಹಿಳಾ ಶಿಕ್ಷಕಿಯರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಂಘವು ಆಹ್ವಾನಿಸುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here