ದಸ್ತಾಪೂರ ಗ್ರಾಮಕ್ಕೆ ಮಳೆ ನೀರು ನಿಗ್ಗಿ ಜನಜೀವನ ಅಸ್ತವ್ಯಸ್ತ

0
23

ಕಲಬುರಗಿ: ತಾಲೂಕಿನ ಕಮಲಾಪೂರ ಗ್ರಾಮ, ಬೇಣ್ಣೆತೋರ, ದಸ್ತಾಪೂರ ಗ್ರಾಮಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸ್ಥಳಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಲೀಮ್ ಇನಾಮದಾರ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ದಸ್ತಾಪೂರ ಗ್ರಾಮ ಗಂಡೋರಿ ನಾಲ ಮತ್ತು ಬೆಣ್ಣೆತೋರೆ ಎರಡು ಡ್ಯಾಮಿನಲ್ಲಿ ಹೆಚ್ಚುವರಿ ನೀರು ಬಿಟ್ಟಾಗ ಜಲಾವೃತ್ತವಾಗುತ್ತಿರುವುದರಿಂದ ದಸ್ತಾಪೂರ ಗ್ರಾಮವು ಮುಳಗಡೆ ಪ್ರದೇಸವೆಂದು ಘೋಷಿಸಿ ಪುನರವಸತಿ ಕಲ್ಪಿಸಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ರೈತನ ಜಮೀನಿಗೆ ನೀರು ಹೊಕ್ಕಿ ಬೆಳೆಹಾನಿ ಆಗಿದ್ದು ಜನರ ಜೀವನ ಅಸ್ಥವ್ಯಸ್ಥವಾಗಿದ್ದು ಭಯದ ವಾತಾವರಣ ನಿರ್ಮಾಣವಾಗಿದ್ದು ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ದಸ್ತಾಪೂರ ಗ್ರಾಮವು ಮುಳಗಡೆ ಪ್ರದೇಶವೆಂದು ಘೋಷಿಣೆ ಮಾಡಬೇಕು ಹಳ್ಳದ ಪಕ್ಕದಲ್ಲಿ ಇರುವ ಮಾದಿಗ ಸಮಾಜದ ೨೦ ಮನೆಗಳು ನೀರಿನಲ್ಲಿ ಮುಳಗಿ ಮನೆಯಲ್ಲಿ ಇರುವ ವಸ್ತುಗಳು ಕೊಚ್ಚಿಕೊಂಡು ಹೋಗಿರುತ್ತದೆ.

ಹಾಗೆಯೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ಡಟವು ೧೯೫೨ ರ ಹಳೆಯ ಕಟ್ಟಡವಾಗಿದ್ದು ಇದು ಕೂಡ ದುರಸ್ಥಿ ಮಾಡಬೇಕು ಎಂದು ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಮಹ್ಮದ್ ಇನಾಮದಾರ ಅವರಿಗೆ ಸಮಸ್ತ ದಸ್ತಾಪೂರ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪ್ರವಿಣ ಜಾಧವ, ಶರಣಪ್ಪ ಹೆಚ್.ದಸ್ತಾಪೂರ, ಚನ್ನವೀರ ಮಾಂಗ್, ಲಕ್ಕನ್ ಎಂ ಮಾಂಗ್, ಅನೀಲಕುಮಾರ ದಂಡೆ, ದೇವರಾಜ ಕೋಟ್ರೆ, ಯಶವಂತ ಮಾಂಗ್ ಗ್ರಾಮಸ್ಥರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here