ಕಲಬುರಗಿ: ರಂಗ ಸಂಗೀತಕ್ಕೆ ಹೊಸ ಸ್ವರೂಪ ನೀಡಿದ ಪದ್ಮಶ್ರೀ ಬಿ.ವಿ.ಕಾರಂತರು ಭಾರತೀಯ ರಂಗ ಭೂಮಿಗೆಕನ್ನಡದ ಮೂಲಕ ಹೊಸಕಾಣಿಕೆ ನೀಡಿದ್ದಾರೆಂದು ಹಿರಿಯ ರಂಗ ಕರ್ಮಿಪ್ರೊ. ಪ್ರಭಾಕರ್ ಸಾತಖೇಡ ಹೇಳಿದರು.
ಕಲಬುರಗಿ ರಂಗಾಯಣದಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ರಂಗ ಸಂಗೀತ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಬಾಲ್ಯ ದಿಂದಲೆ ವೃತ್ತಿ ರಂಗ ಭೂಮಿಯತ್ತಅಸಕ್ತರಾಗಿ ಗುಬ್ಬಿ ವೀರಣ ನಾಟಕ ಕಂಪನಿ ಸೇರಿ ಕಲಾಪಟ್ಟುಗಳನ್ನು ಕಲಿತುಕ್ರಮೇಣ ಬೆಳೆದಂತೆಲ್ಲ ಹವ್ಯಾಸಿ ರಂಗಭೂಮಿ ಕಡೆಗೆ ವಾಲಿದ ಕಾರಂತರು ಹೊಸ ಹೊಸ ಪ್ರಯೋಗಳಿಂದ ದೇಶದ ರಂಗಭೂಪಟದಲ್ಲಿ ಕರ್ನಾಟಕ ಕ್ಕೆವಿಶೇಷಸ್ಥಾನ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಬಿ.ವಿ. ಕಾರಂತರ ಜನ್ಮದಿನ ಆಚರಿಸುತ್ತಿರುವುದು ಸ್ವಾಗತಾರ್ಹಸಂಗತಿ ಕಲಬುರಗಿ ರಂಗಾಯಣವುವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ಹೊಸ ಪರಂಪರೆಗೆ ನಾಂದಿಹಾಡಿದ್ದು ಶ್ಲಾಘನೀಯ ಎಂದರು. ರಂಗ ಸಮಾಜದ ಸದಸ್ಯ ಶ್ರೀಧರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ರಂಗಾಯಣದ ಅಧ್ಯಕ್ಷ ಪ್ರಭಾಕರ್ ಜೋಶಿ ಅಧ್ಯಕ್ಷತೆ ವಹಿಸಿದರು.
ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಪ್ರದೀಪ ಬಿ.ಎಸ್. ಕಡೂನ್ ನಿರೂಪಿಸಿದರು.
ಡಾ. ಲಕ್ಷ್ಮೀ ಶಂಕರ ಜೋಶಿ, ಸ್ವಾತಿ ಶಂಕರ ಜೋಶಿ ಮತ್ತುಡಾ. ಸಂದೀಪಬಿ. ಹಾಗೂ ಸಿದ್ಧಾರ್ಥ ಚಿಮ್ಮಾಇದ್ಲಾಯಿ ಅವರುನಡಿಸಿ ಕೊಟ್ಟ ರಂಗಸಂಗೀತಸಭಿಕರ ಮನಸೂರೆ ಗೊಂಡವು. ಪ್ರೊ. ಈಶ್ವರ ಇಂಗನ್, ಶಂಕರಯ್ಯಘಂಟಿ, ರಾಘವೇಂದರ್ ಹಳೆಪೇಟ್ಟೆ, ಸುರೆಶ ಬಡಿಗೇರ, ಡಾ. ಸುಧೀಂದ್ರ ರಾವ್, ಹಣಮಂತ ಘಂಟೆಕರ್, ವೈಭವ ಕೇಸಕರ್, ಡಾ. ಸುರೇಶ ಹೇರೂರ ಇತರರು ಇದ್ದರು.
ಕಾರಂತರ ಸ್ಮರಣಾರ್ಥ ಸಸಿನೆಟ್ಟ ಅತಿಥಿಗಳು ಕಾರ್ಯಕ್ರಮದ ನಂತರ ರಂಗಾಯಣದ ಆವರಣದಲ್ಲಿ ಕಾರಂತರಸ್ಮರಣಾರ್ಥವಾಗಿ ಸಸಿಗಳನ್ನು ನೆಡಲಾಯಿತು.