ನದಿಯಲ್ಲಿ ಪ್ರವಾಹ ಇಳಿಮುಖ- ಸೇತುವೆ ಮೂಲಕ ಸಂಚಾರ ಪ್ರಾರಂಭ

0
103

ಶಹಾಬಾದ:ತಾಲೂಕಿನಲ್ಲಿ ಎರಡು ದಿನಗಳಿಂದ ಮಳೆಯಾಗದ ಪರಿಣಾಮ ಕಾಗಿಣಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿ ಮುತ್ತಗಾ ಗ್ರಾಮಕ್ಕೆ ಹಾಗೂ ಮುತ್ತಗಾದಿಂದ ಜೀವಣಗಿ ಮಾರ್ಗ ವಾಹನ ಸಂಚಾರ ಪ್ರಾರಂಭಗೊಂಡಿದೆ.

ಕಳೆದ ಐದಾರು ದಿನಗಳಿಂದ ಮಳೆಯಾದ ಪರಿಣಾಮ ಕಾಗಿಣಾ ನದಿಯಲ್ಲಿ ಪ್ರೆವಾಹ ಉಂಟಾಗಿ ಎಲ್ಲಾ ಸೇತುವೆ ಮುಳುಗಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಮುತ್ತಗಾ ಗ್ರಾಮಕ್ಕೆ ಹೋಗುವ ಮಧ್ಯದ ಭಂಕೂರ ಗ್ರಾಮದ ಹೊರವಲಯದಲ್ಲಿರುವ ಸಣ್ಣ ಸೇತುವೆ ಮೇಲಿಂದ ಭಾರಿ ಪ್ರಮಾಣದ ನೀರು ಉಕ್ಕಿ ಹರಿಯುತ್ತಿತ್ತು.ಅಲ್ಲದೇ ಮುತ್ತಗಾ ಗ್ರಾಂದ ಹೊರವಲಯದ ಬ್ರಿಡ್ಜ್ ಕಮ್ ಬ್ಯಾರೇಜ್ ಮಾರ್ಗವೂ ಸಂಪೂರ್ಣ ಮುಳುಗಿ ಹೋಗಿದ್ದರಿಂದ ಮುತ್ತಗಾ ಗ್ರಾಮಸ್ಥರು ಮೂರು ದಿನಗಳಿಂದ ಗ್ರಾಮದಿಂದ ಹೊರಬರದಂತಾಗಿತ್ತು.

Contact Your\'s Advertisement; 9902492681

ಯಾರಾದರೂ ಶಹಾಬಾದ ನಗರಕ್ಕೆ ಹೋಗಬೇಕಾದರೆ ಕಾಟಮ್ಮದೇವರ ಹಳ್ಳಿ ಮಾರ್ಗವಾಗಿ ಸುತ್ತುವರಿದು ಹೋಗುವ ಅನಿವಾರ್ಯ ಬಂದಿತ್ತು. ಅಲ್ಲದೇ ಗೋಳಾ(ಕೆ) ಗ್ರಾಮದಿಂದ ವಾಡಿ ಹೋಗುವ ಮಾರ್ಗವೂ ಬಂದ್ ಆಗಿತ್ತು. ಸತತವಾಗಿ ಸುರಿದ ಮಳೆ ಮತ್ತು ಬೆಣ್ಣೆತೋರಾ ಡ್ಯಾಮ್ನಿಂದ ಹೊರಬಿಟ್ಟ ಅಪಾರ ಪ್ರಮಾಣದ ನೀರು ಕಾಗಿಣಾ ನದಿಯಲ್ಲಿ ಪ್ರವಾಹ ಉಂಟಾಗಿ ಸುತ್ತಮುತ್ತಲಿನ ಮುತ್ತಗಾ, ಗೋಳಾ(ಕೆ), ಭಂಕೂರ, ಶಂಕರವಾಡಿ, ಮಾಲಗತ್ತಿ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಎರಡು ದಿನಗಳಿಂದ ಮಳೆಯಾಗದ ಪರಿಣಾಮ ಪ್ರವಾಹ ಇಳಿಮುಖವಾಗಿದ್ದು, ಸೇತುವೆ ಮೇಲಿಂದ ವಾಹನ ಸಂಚಾರ ಪ್ರಾರಂಭವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here